ಅಮೀರ್ ಖಾನ್ ಹಾಗೂ ಲಾಲ್ ಸಿಂಗ್ ಚಡ್ಡಾ ಚಿತ್ರತಂಡವು ಕಳೆದ ಎರಡು ವರ್ಷಗಳಿಂದ ಭಾರೀ ಕಷ್ಟಪಟ್ಟಿರುವುದಾಗಿ ನಟಿ ಕರೀನಾ ಕಪೂರ್ ತಿಳಿಸಿದ್ದಾರೆ.
ಹಾಲಿವುಡ್ ಚಿತ್ರ ಫಾರೆಸ್ಟ್ ಗಂಪ್ನಿಂದ ಸ್ಪೂರ್ತಿ ಪಡೆದ ಚಿತ್ರವಾದ ಲಾಲ್ ಸಿಂಗ್ ಚಡ್ಡಾದ ಚಿತ್ರೀಕರಣವು 2019ರಲ್ಲಿ ಆರಂಭಗೊಂಡಿದ್ದು, ಸಾಂಕ್ರಮಿಕದ ಕಾರಣದಿಂದಾಗಿ ನಿರ್ಮಾಣ ಕಾರ್ಯ ನಿಧಾನವಾಗಿ ಸಾಗಿದೆ.
BIG NEWS: ಅನಾಥ ಮಕ್ಕಳ ಆಶ್ರಮಗಳಲ್ಲಿ ಸೆಲೆಬ್ರಿಟಿಗಳು, ರಾಜಕಾರಣಿಗಳ ಅದ್ಧೂರಿ ಹುಟ್ಟುಹಬ್ಬ ಆಚರಣೆಗೆ ಬ್ರೇಕ್
ತಮ್ಮದೇ ಬ್ಯಾನರ್ನಡಿ ಚಿತ್ರವನ್ನು ನಿರ್ಮಿಸುತ್ತಿರುವ ಅಮೀರ್ ಖಾನ್ ಕುರಿತು ಮಾತನಾಡಿದ ಕರೀನಾ ಕಪೂರ್, ʼ3 ಈಡಿಯಟ್ಸ್ʼ ಹಾಗೂ ʼತಲಾಶ್ʼ ಆದ ಮೇಲೆ ಮೂರು ವರ್ಷಗಳ ಬಳಿಕ ನಾವಿಬ್ಬರೂ ಜೊತೆಯಾಗಿ ನಟಿಸುತ್ತಿರುವುದು ನನಗೆ ಬಹಳ ಖುಷಿ ಕೊಟ್ಟಿದೆ. ಇದು ಬಹಳ ವಿಶೇಷವಾಗಿದ್ದು ನಾವು ಬಹಳ ಕಷ್ಟಪಟ್ಟಿದ್ದೇವೆ. ಅದರಲ್ಲೂ ಅಮೀರ್ ಬಹಳ ಪ್ರಯತ್ನ ನಡೆಸಿದ್ದಾರೆ. ಚಿತ್ರದ ಸ್ಕ್ರಿಪ್ಟ್ ಅದ್ಭುತವಾಗಿದ್ದು, ಪ್ರತಿಯೊಬ್ಬರೂ ಇಷ್ಟಪಡುವಂತೆ ತೆರೆಯ ಮೇಲೆ ಬರಲಿದೆ ಎಂದು ಆಶಿಸುತ್ತೇನೆ,” ಎಂದು ಹೇಳಿದ್ದಾರೆ.
ಆಟವಾಡುವಾಗಲೇ ಕಾದಿತ್ತು ದುರ್ವಿದಿ: ನೀರಿನ ತೊಟ್ಟಿಗೆ ಬಿದ್ದು ಬಾಲಕ ಸಾವು
“ಕೋವಿಡ್ ಅಲೆಯ ನಡುವೆಯೇ ದೆಹಲಿಯಲ್ಲಿ ನನ್ನ ಭಾಗದ ಚಿತ್ರೀಕರಣ ಮುಗಿಸಿದ್ದೇವೆ. ಸಾಂಕ್ರಾಮಿಕದ ನಡುವೆಯೂ ನಾನು ಸೆಟ್ಗೆ ಹೋಗಿದ್ದು ಅದೇ ಮೊದಲು. ಮಾರ್ಗಸೂಚಿಗಳನ್ನು ಪಾಲಿಸಿದ ನಾವು, ಆತ್ಮವಿಶ್ವಾಸದಿಂದಲೇ ಕೆಲವೇ ಜನಗಳ ನಡುವೆಯೇ ಶೂಟಿಂಗ್ ಪೂರೈಸಿದ್ದೇನೆ,” ಎಂದಿದ್ದಾರೆ ಕರೀನಾ.
ಕ್ರಿಸ್ಮಸ್ ಸಂದರ್ಭದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದ್ದ ಲಾಲ್ ಸಿಂಗ್ ಚಡ್ಡಾದ ಬಿಡುಗಡೆಯನ್ನು ಫೆಬ್ರವರಿಯಲ್ಲಿ ಪ್ರೇಮಿಗಳ ದಿನಾಚರಣೆಗೆ ಮುಂದೂಡಲಾಗಿದೆ.