ಸೆಲೆಬ್ರಿಟಿಗಳ ಜೊತೆ ಫೋಟೋ ತೆಗೆಸಿಕೊಳ್ಳಲು ಅಭಿಮಾನಿಗಳು ಮುಗಿ ಬೀಳುವುದು ಸಹಜ ಸಂಗತಿ. ಆದರೆ ಕೆಲವೊಮ್ಮೆ ಅಭಿಮಾನಿಗಳು ತೋರುವ ಅತಿರೇಕದ ವರ್ತನೆ ಸೆಲೆಬ್ರಿಟಿಗಳನ್ನು ಮುಜುಗರಕ್ಕೀಡು ಮಾಡುತ್ತದೆ. ಅಂತಹುದೇ ಒಂದು ಘಟನೆ ಮುಂಬೈನಲ್ಲಿ ನಡೆದಿದೆ.
ಬಾಲಿವುಡ್ ನಟಿ ಕರೀನಾ ಕಪೂರ್ ಗೆ ಇಂತಹ ಮುಜುಗರದ ಪರಿಸ್ಥಿತಿಯನ್ನು ಮುಂಬೈ ವಿಮಾನ ನಿಲ್ದಾಣದಲ್ಲಿ ಎದುರಿಸಿದ್ದು, ನಟಿ ಜೊತೆಗೆ ಸೆಲ್ಫಿ ತೆಗೆಸಿಕೊಳ್ಳಲು ಬಂದ ಅಭಿಮಾನಿಯೊಬ್ಬ ನೇರವಾಗಿ ಹೆಗಲ ಮೇಲೆ ಕೈ ಹಾಕಲು ಮುಂದಾಗಿದ್ದಾನೆ.
ಇದರಿಂದ ಕರೀನಾ ಕಪೂರ್ ಬೆಚ್ಚಿಬಿದ್ದಿದ್ದು ಇರುಸುಮುರುಸಿಗೆ ಒಳಗಾಗಿದ್ದಾರೆ. ಅಷ್ಟರಲ್ಲಿಯೇ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡ ಕರೀನಾ ಕಪೂರ್ ಬಾಡಿಗಾರ್ಡ್ ಆತನ ಕೈಯನ್ನು ದೂರ ತಳ್ಳಿದ್ದಾರೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.