ಕಾರವಾರ: ಪ್ರೇಯಸಿಗಾಗಿ ಮೆಕಾನಿಕಲ್ ಇಂಜಿನಿಯರ್ ಆರು ತಿಂಗಳನಿಂದ ಗಾರೆ ಕೆಲಸ ಮಾಡಿಕೊಂಡಿದ್ದ ಸಂಗತಿ ಬಯಲಾಗಿದೆ.
ತಮಿಳುನಾಡಿನ ಪುದುಕೋಟೈ ಜಿಲ್ಲೆಯ ಬೀರ್ ಮೊಯಿದ್ದೀನ್ ಎಂಬಾತ ಮೆಕಾನಿಕಲ್ ಇಂಜಿನಿಯರ್ ಆಗಿದ್ದು, ವಿವಾಹಿತೆ ಆಯೇಶಾ ಜೊತೆಗೆ ಕಾರವಾರಕ್ಕೆ ಬಂದು ಆರು ತಿಂಗಳಿನಿಂದ ನೆಲೆಸಿದ್ದ. ತಮಿಳುನಾಡು ಪೊಲೀಸ್ ಠಾಣೆಯಲ್ಲಿ ಆಯೇಶಾ ನಾಪತ್ತೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿತ್ತು.
ಕಾರವಾರದಲ್ಲಿ ಇವರನ್ನು ಪತ್ತೆ ಮಾಡಿದ ತಮಿಳುನಾಡು ಪೊಲೀಸರು ಶನಿವಾರ ಕಾರವಾರಕ್ಕೆ ಬಂದು ಶಹರ ಪೊಲೀಸ್ ಠಾಣೆ ಪೊಲೀಸರ ನೆರವಿನೊಂದಿಗೆ ಪ್ರೇಮಿಗಳನ್ನು ತಮಿಳುನಾಡಿಗೆ ಕರೆದುಕೊಂಡು ಹೋಗಿದ್ದಾರೆ.
ದೂರದ ಸಂಬಂಧಿಗಳಾಗಿದ್ದ ಮೊಯಿದ್ದೀನ್ ಮತ್ತು ಆಯೇಶಾ 12 ವರ್ಷಗಳ ಹಿಂದಿನಿಂದಲೂ ಪ್ರೀತಿಸಿದ್ದರು. ಇವರ ಮದುವೆಗೆ ಒಪ್ಪದ ಪೋಷಕರು ಆಯೇಶಾ ಇಚ್ಛೆಗೆ ವಿರುದ್ಧವಾಗಿ ಬೇರೆಯವನೊಂದಿಗೆ 10 ವರ್ಷಗಳ ಹಿಂದೆ ಮದುವೆ ಮಾಡಿದ್ದು, ಇಬ್ಬರು ಮಕ್ಕಳಿದ್ದಾರೆ. ಆದರೂ ಮೊಯಿದ್ದೀನ್ ಜೊತೆಗೆ ಸಂಪರ್ಕದಲ್ಲಿದ್ದ ಆಯೇಶಾ 6 ತಿಂಗಳ ಹಿಂದೆ ಮಕ್ಕಳನ್ನು ಬಿಟ್ಟು ಮೊಯಿದ್ದೀನ್ ಜೊತೆಗೆ ಕಾರವಾರಕ್ಕೆ ಬಂದು ನೆಲೆಸಿದ್ದರು. ಇಂಜಿನಿಯರ್ ಆಗಿದ್ದ ಮೊಯಿದ್ದೀನ್ ಜೀವನ ನಡೆಸಲು ಗಾರೆ ಕೆಲಸ ಮಾಡಿಕೊಂಡಿದ್ದರು.