
ಹೊಸಪೇಟೆ: ಮುತ್ತಿನ ರಾಶಿ ಮೂರು ಭಾಗ ಆದೀತಲೇ ಪರಾಕ್ ಎಂದು ಐತಿಹಾಸಿಕ ಮೈಲಾರದಲ್ಲಿ ಮೈಲಾರಲಿಂಗೇಶ್ವರನ ಕಾರ್ಣಿಕ ನುಡಿಯಲಾಗಿದೆ.
ಕಾರ್ಣಿಕವನ್ನು ವರ್ಷದ ಭವಿಷ್ಯವಾಣಿ ಎಂದೆ ನಂಬಲಾಗುತ್ತದೆ. ವಿಜಯನಗರ ಜಿಲ್ಲೆ ಹೂವಿನ ಹಡಗಲಿ ತಾಲ್ಲೂಕಿನ ಮೈಲಾರದಲ್ಲಿ ಮುತ್ತಿನ ರಾಶಿ ಮೂರು ಭಾಗ ಆದೀತಲೇ ಪರಾಕ್ ಎಂದು ಬಿಲ್ಲನ್ನೇರಿ ಗೊರವಯ್ಯ ಕಾರ್ಣಿಕ ನುಡಿದಿದ್ದಾರೆ. ಈ ಬಾರಿ ರಾಜ್ಯ ರಾಜಕಾರಣ ಮೂರು ಭಾಗ ಆಗುತ್ತದೆ. ರೈತರು ಬೆಳೆದ ಬೆಳೆ ಕೂಡ ಮೂರು ಪಾಲಾಗುತ್ತದೆ ಎಂದು ಕಾರ್ಣಿಕ ವಿಶ್ಲೇಷಿಸಲಾಗಿದೆ.