
ಹೊಸಪೇಟೆ: ಮೈಲಾರ ದೇಗುಲದಲ್ಲಿ ಮೈಲಾರಲಿಂಗೇಶ್ವರ ಕಾರ್ಣಿಕ ನುಡಿಯಲಾಗಿದೆ. ‘ಮಳೆ ಬೆಳೆ ಸಂಪಾಯಿತಲೇ ಪರಾಕ್’ ಎಂದು ಮೈಲಾರದಲ್ಲಿ ಗೊರವಯ್ಯ ರಾಮಪ್ಪ ಕಾರ್ಣಿಕ ನುಡಿದಿದ್ದಾರೆ.
ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಮೈಲಾರದಲ್ಲಿ ಕಾರ್ಣಿಕ ನುಡಿಯಲಾಗಿದೆ. ಪ್ರಸಕ್ತ ವರ್ಷದಲ್ಲಿ ಮಳೆ ಬೆಳೆ ಸಮೃದ್ಧಿಯಾಗಲಿದೆ ಎಂದು ಕಾರ್ಣಿಕ ನುಡಿಯನ್ನು ದೇಗುಲದ ಧರ್ಮದರ್ಶಿ ವೆಂಕಪ್ಪಯ್ಯ ವಿಶ್ಲೇಷಿಸಿದ್ದಾರೆ.
ಮೈಲಾರ ಲಿಂಗೇಶ್ವರ ಕಾರ್ಣಿಕ ನುಡಿಯನ್ನು ವರ್ಷದ ಭವಿಷ್ಯವಾಣಿ ಎಂದು ಹೇಳಲಾಗುತ್ತದೆ.