ಬಾಲಿವುಡ್ ನಿರ್ದೇಶಕ ಕರಣ್ ಜೋಹರ್ ವಿವಾದಗಳಿಗೆ ಹೊಸದೇನಲ್ಲ. ಇದೀಗ ಕರಣ್ ಜೋಹರ್ ಅವರ ಹಳೆಯ ವಿಡಿಯೋ ವೈರಲ್ ಆಗಿದೆ. ಇತ್ತೀಚೆಗೆ, ಕರಣ್ ಜೋಹರ್ ಅನುಷ್ಕಾ ಶರ್ಮಾ ಅವರ ವೃತ್ತಿಜೀವನವನ್ನು ಹಾಳುಮಾಡಲು ಬಯಸುತ್ತಿರುವುದನ್ನು ಒಳಗೊಂಡಿರುವ ಹಳೆಯ ವಿಡಿಯೋ ಹರಿದಾಡಿದೆ.
ಕಂಗನಾ ರಣಾವತ್‌ನಿಂದ ಹಿಡಿದು ವಿವೇಕ್ ಅಗ್ನಿಹೋತ್ರಿಯವರೆಗೆ, ಹಲವಾರು ಪ್ರಸಿದ್ಧ ಸೆಲೆಬ್ರಿಟಿಗಳು ತಮ್ಮ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳಿಗೆ 2016 ರಲ್ಲಿ ಮಾಡಿದ ನಿರ್ದೇಶಕರ ಕಾಮೆಂಟ್‌ಗಳ ಕುರಿತು ಹಂಚಿಕೊಂಡಿದ್ದಾರೆ. ಇದಕ್ಕೆ ಕರಣ್ ಜೋಹರ್ ತಿರುಗೇಟು ನೀಡಿದ್ದಾರೆ.
ನಾನು ಯಾರಿಗೂ ತಲೆಬಾಗುವುದಿಲ್ಲ. ಸುಳ್ಳಿನ ಗುಲಾಮನಾಗಲಾರೆ. ನಾನು ಏನನ್ನೂ ಹೇಳುವುದಿಲ್ಲ. ನೀವು ಎಷ್ಟೇ ಅಪಪ್ರಚಾರ ಮಾಡಲು ಮತ್ತು ನನ್ನನ್ನು ಕೆಟ್ಟದಾಗಿ ತೋರಿಸಲು ಪ್ರಯತ್ನಿಸಿದರೂ ನನಗೇನು ಆಗುವುದಿಲ್ಲ. ನನ್ನ ಒಳ್ಳೆಯತನವೇ ನನ್ನ ಗೆಲುವು. ನಿಮ್ಮ ಕತ್ತಿಯನ್ನು ನೀವು ಎತ್ತಿಕೊಳ್ಳಬಹುದು. ಆದರೆ, ನಾನು ಸಾಯುವುದಿಲ್ಲ ಎಂದು ಪೋಸ್ಟ್ ಮಾಡಿದ್ದಾರೆ.
ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಹಾಲಿವುಡ್‌ಗೆ ಸ್ಥಳಾಂತರಗೊಳ್ಳುವ ನಿರ್ಧಾರವನ್ನು ತಳೆದಾಗ ಕರಣ್ ಜೋಹಾರ್ ರತ್ತ ಬೊಟ್ಟು ಮಾಡಲಾಯಿತು. ಇವರಿಂದಾಗಿಯೇ ಪಿಗ್ಗಿ ಬಾಲಿವುಡ್ ನಿಂದ ದೂರ ಸರಿಯುವಂತಾಯಿತು ಎಂಬ ಮಾತುಗಳು ಕೇಳಿಬಂತು.
ಅಂದಹಾಗೆ, ನಟಿ ಅನುಷ್ಕಾ ಮತ್ತು ಕರಣ್ ಇನ್ನೂ ಪರಸ್ಪರ ಸ್ನೇಹದಿಂದ ಇದ್ದಾರೆ. ಪ್ರಿಯಾಂಕಾ ಚೋಪ್ರಾ ಕೂಡ ಇತ್ತೀಚೆಗೆ ನೀತಾ ಮುಖೇಶ್ ಅಂಬಾನಿ ಕಲ್ಚರ್ ಸೆಂಟರ್ ಗ್ರ್ಯಾಂಡ್ ಲಾಂಚ್‌ನಲ್ಲಿ ಕರಣ್ ಜೋಹಾರ್ ರನ್ನು ಅಪ್ಪಿಕೊಂಡು ಸ್ವಾಗತಿಸಿದ್ದರು.