ಬಾಲಿವುಡ್ ನಟ ರಣವೀರ್ ಸಿಂಗ್ ಜೊತೆಗೆ ಜಾಹೀರಾತೊಂದರಲ್ಲಿ ಕಾಣಿಸಿಕೊಂಡ ವಿಶ್ವಕಪ್ ವಿಜೇತ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಕಪಿಲ್ ದೇವ್ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡಿದ್ದಾರೆ.
ಸಾಮಾನ್ಯವಾಗಿ ಮೈದಾನ ಹಾಗೂ ಹೊರಗೆ ಸ್ಥಿತಪ್ರಜ್ಞರಾಗಿ ಗುರುತಿಸಿಕೊಂಡಿರುವ ಕಪಿಲ್‌ರ ಭಿನ್ನ ಮುಖವೊಂದನ್ನು ಈ ಜಾಹೀರಾತು ತೋರಿದೆ.
BIG NEWS: ಟಿ-20 ವಿಶ್ವಕಪ್‌ಗೆ ಬರಲಿದೆ ಬ್ಯಾಟ್ ಟ್ರಾಕಿಂಗ್ ವ್ಯವಸ್ಥೆ
ಕ್ರೆಡಿಟ್ ಕಾರ್ಡ್ ಬಿಲ್ ಪಾವತಿಯ ಅಪ್ಲಿಕೇಶನ್‌ಗೆ ಸೃಷ್ಟಿ ಮಾಡಲಾಗಿದ್ದ ಕೆಲವೊಂದು ಜಾಹೀರಾತುಗಳು ಕ್ರಿಕೆಟರ್‌ಗಳಾದ ರಾಹುಲ್ ದ್ರಾವಿಡ್, ವೆಂಕಟೇಶ್ ಪ್ರಸಾದ್ ಹಾಗೂ ಟೋಕಿಯೋ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾರನ್ನು ತಾರಾಗಣದಲ್ಲಿ ಇಳಿಸಿದ್ದವು.
ಮಂಗಳೂರು: ಕಚೇರಿಯಲ್ಲೇ ಖ್ಯಾತ ವಕೀಲನಿಂದ ಲೈಂಗಿಕ ಕಿರುಕುಳ, ಆಡಿಯೋ ವೈರಲ್; ದೂರು ದಾಖಲು
ರಾಹುಲ್ ದ್ರಾವಿಡ್‌ರ ’ಇಂದಿರಾನಗರ ಗೂಂಡಾ’ ಜಾಹೀರಾತು ಖ್ಯಾತಿ ಪಡೆದ ಬಳಿಕ ಇದೀಗ ಕಪಿಲ್ ದೇವ್ ಇದೇ ಸರಣಿಯ ಜಾಹೀರಾತಿನಲ್ಲಿ ರಣವೀರ್ ಸಿಂಗ್‌ರ ಫ್ಯಾಶನ್ ಆಯ್ಕೆಯನ್ನು ಮಿಮಿಕ್ರಿ ಮಾಡಿ ತೋರಿದ್ದಾರೆ. ಕಪಿಲ್‌ರ ಜೀವನ ಚರಿತ್ರೆ ಆಧರಿಸಿದ ಚಿತ್ರ ’83’ಯಲ್ಲಿ ರಣ್ವೀರ್ ಮಾಜಿ ನಾಯಕನ ಪಾತ್ರ ನಿರ್ವಹಿಸುತ್ತಿದ್ದಾರೆ.
ಈ ಜಾಹೀರಾತಿನ ಕ್ಲಿಪ್ ಅನ್ನು ಕಪಿಲ್ ಟ್ವಿಟರ್‌ನಲ್ಲಿರುವ ತಮ್ಮ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.
https://twitter.com/therealkapildev/status/1448965513728516101?ref_src=twsrc%5Etfw%7Ctwcamp%5Etweetembed%7Ctwterm%5E1448965513728516101%7Ctwgr%5E%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fkapil-dev-s-on-point-mimicry-of-ranveer-singh-in-viral-ad-sparks-hilarious-meme-fest-best-reactions-1866079-2021-10-18