alex Certify Kanthara Chapter-1 : ‘ಕಾಂತಾರ’-1 ಚಿತ್ರದಲ್ಲಿ ನೀವು ಅಭಿನಯಿಸ್ಬೇಕೆ..? : ಜಸ್ಟ್ ಹೀಗೆ ಮಾಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Kanthara Chapter-1 : ‘ಕಾಂತಾರ’-1 ಚಿತ್ರದಲ್ಲಿ ನೀವು ಅಭಿನಯಿಸ್ಬೇಕೆ..? : ಜಸ್ಟ್ ಹೀಗೆ ಮಾಡಿ

ಪ್ರತಿಭಾನ್ವಿತ ನಿರ್ದೇಶಕ, ನಟ ರಿಷಬ್ ಶೆಟ್ಟಿ ನಿರ್ದೇಶನದ ಬಹು ನಿರೀಕ್ಷಿತ ಕಾಂತಾರ ಚಾಪ್ಟರ್-1 ಫಸ್ಟ್ ಲುಕ್ ಟೀಸರ್ ಆಗಿ ಯೂಟ್ಯೂಬ್ ನಲ್ಲಿ ಧೂಳೆಬ್ಬಿಸುತ್ತಿದೆ.

ಇದೀಗ ಹೊಸ ವಿಚಾರ ಅಂದರೆ ಕಾಂತಾರ ಸಿನಿಮಾದಲ್ಲಿ ನಟಿಸಲು ಕಲಾವಿದರುಬೇಕಾಗಿದ್ದಾರೆ.  ನಿಮಗೆ ಕಾಂತಾರ ಚಾಪ್ಟರ್-1 ಚಿತ್ರದಲ್ಲಿ ಅಭಿನಯಿಸಬೇಕು ಎಂಬ ಆಸೆ ಉಂಟಾ..? ಅಂತಹ ಪ್ರತಿಭೆ ನಿಮ್ಮಲ್ಲಿ ಉಂಟಾ..? ಹಾಗಿದ್ರೆ ನೀವು ಆಡಿಷನ್ ನಲ್ಲಿ ಭಾಗಿಯಾಗಬಹುದು. ಹೌದು. ಅದು ಕೂಡ ಬಹಳ ಸುಲಭ. ಜಸ್ಟ್ ಈ ಒಂದು ಲಿಂಕ್(www.kantara.film) ಕ್ಲಿಕ್ ಮಾಡುವ ಮೂಲಕ ಆಡಿಷನ್ ನೀಡಬಹುದು.

ಕಾಂತಾರ ಅಧ್ಯಾಯ 1ʼ ಚಿತ್ರ ನಿರ್ಮಿಸುತ್ತಿರುವ ಹೊಂಬಾಳೆ ಫಿಲ್ಮ್ಸ್ ತನ್ನ ಸಾಮಾಜಿಕ ಜಾಲತಾಣ ಪೇಜ್ನಲ್ಲಿ ಕಲಾವಿದರು ಬೇಕಾಗಿದ್ದಾರೆ ಎಂದು ಪೋಸ್ಟ್ ಹಂಚಿಕೊಂಡಿದೆ. ಚಿತ್ರದಲ್ಲಿ ನಟಿಸಲು 30ರಿಂದ 60ರ ವಯಸ್ಸಿನ ಪುರುಷರು ಬೇಕಾಗಿದ್ದಾರೆ. 18ರಿಂದ 60 ವಯಸ್ಸಿನ ಮಹಿಳೆಯರೂ ಬೇಕಾಗಿದ್ದಾರೆ ಎಂದು ಪೋಸ್ಟ್ನಲ್ಲಿ ತಿಳಿಸಲಾಗಿದೆ.

ಆಸಕ್ತರು (https://www.kantara.film/)  ಈ ಲಿಂಕ್ ಒತ್ತಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಬಹುದು. ರೀಲ್ಸ್ ಮತ್ತು ಅವುಗಳನ್ನು ಹೋಲುವ ಇತರ ವಿಷಯಗಳನ್ನು ಸ್ವೀಕರಿಸುವುದಿಲ್ಲ ಎಂದು ಚಿತ್ರತಂಡ ಹೇಳಿದೆ.ಡಿ. 14ರ ರೊಳಗಾಗಿ ಆಡಿಷನ್ ನೀಡಬಹುದು.

ಕಳೆದ ವರ್ಷ ಸೆಪ್ಟಂಬರ್ 30ರಂದು ಬಿಡುಗಡೆಯಾಗಿದ್ದ ‘ಕಾಂತರಾ’ ಸಿನಿಮಾ ದೇಶದಲ್ಲೆಡೆ ಅಬ್ಬರಿಸಿ ದಾಖಲೆ ಬರೆದಿತ್ತು. ಸ್ಯಾಂಡಲ್ವುಡ್ ಜನಪ್ರಿಯ ನಿರ್ಮಾಣ ಸಂಸ್ಥೆಯಾದ ಹೊಂಬಾಳೆ ಫಿಲಂ ಬ್ಯಾನರ್ ನಡಿ ವಿಜಯ್ ಕಿರಗಂದೂರು ನಿರ್ಮಾಣ ಮಾಡಿದ್ದ ಈ ಚಿತ್ರದಲ್ಲಿ ರಿಷಬ್ ಶೆಟ್ಟಿ ಹಾಗೂ ಸಪ್ತಮಿ ಗೌಡ ಮುಖ್ಯ ಭೂಮಿಯಲ್ಲಿದ್ದು, ಅಚ್ಯುತ್ ಕುಮಾರ್, ಕಿಶೋರ್, ಪ್ರಮೋದ್ ಶೆಟ್ಟಿ, ಮಾನಸಿ ಸುಧೀರ್, ಪ್ರದೀಪ್ ಶೆಟ್ಟಿ, ಚಂದ್ರಕಲಾ ರಾವ್, ನವೀನ್, ಸ್ವರಾಜ್ ಶೆಟ್ಟಿ, ಸತೀಶ್ ಆಚಾರ್ಯ, ರಕ್ಷಿತ್ ರಾಮಚಂದ್ರ ಶೆಟ್ಟಿ, ದೀಪಕ್ ರಾಯ್ ಸೇರಿದಂತೆ ಹಲವರ ತಾರಾ ಬಳಗವಿದೆ. ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ಚಿತ್ರದ ಪ್ಲಸ್ ಪಾಯಿಂಟ್ ಆಗಿತ್ತು. ಇದೀಗ ಕಾಂತಾರ ಚಾಪ್ಟರ್-1 ಪ್ರಾರಂಭವಾಗಿದ್ದು, ಸಿನಿಪ್ರಿಯರಲ್ಲಿ ಸಿಕ್ಕಾಪಟ್ಟೆ ಕ್ಯುರಿಯಾಸಿಟಿ ಹುಟ್ಟಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...