ಶಾಕಿಂಗ್: ಹಾಡಹಗಲೇ ಯುವತಿಗೆ ಮನಬಂದಂತೆ ಥಳಿತ; ಸಹಾಯಕ್ಕೆ ಬಂದವರ ಮೇಲೂ ಹಲ್ಲೆ | Video 18-12-2024 11:58AM IST / No Comments / Posted In: Latest News, India, Live News, Crime News ಉತ್ತರ ಪ್ರದೇಶದ ಕಾನ್ಪುರದಲ್ಲಿನ ಚಕೇರಿ ಪ್ರದೇಶದಲ್ಲಿ ಡಿಸೆಂಬರ್ 14 ರಂದು ಒರ್ವ ಹುಡುಗಿ ಮೇಲೆ ಅಮಾನುಷವಾಗಿ ಹಲ್ಲೆ ಮಾಡಲಾಗಿದೆ. ಆಕೆ ಸ್ಕೂಟರ್‌ನಲ್ಲಿ ಪೆಟ್ರೋಲ್ ಖಾಲಿಯಾದಾಗ ಸಹಾಯಕ್ಕಾಗಿ ಕೇಳಿಕೊಂಡ ಬಳಿಕ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಆದರೆ ನಿಖರ ಕಾರಣ ತಿಳಿದುಬಂದಿಲ್ಲ. ವಿಪುಲ್ ಯಾದವ್ ಮತ್ತು ಸಂಜಯ್ ನಿಶಾದ್ ಎಂದು ಗುರುತಿಸಲಾದ ಇಬ್ಬರು ಯುವಕರು ಅವಳೊಂದಿಗೆ ಅಸಭ್ಯವಾಗಿ ವರ್ತಿಸಿ ತಮ್ಮ ಮನೆಗೆ ಎಳೆದೊಯ್ಯಲು ಪ್ರಯತ್ನಿಸಿದರು ಎಂದು ಆರೋಪಿಸಲಾಗಿದೆ. ವೈರಲ್ ವೀಡಿಯೋದಲ್ಲಿ ಯುವಕ ಅವಳ ಕೂದಲನ್ನು ಎಳೆಯುವುದು, ಹೊಡೆಯುವುದು, ಒದೆಯುವುದು ಮತ್ತು ಅವಳು ಸಹಾಯಕ್ಕಾಗಿ ಕೂಗುತ್ತಿದ್ದಂತೆ ಕಾಲಿಂದ ತಳ್ಳುವುದು ಕಂಡುಬರುತ್ತದೆ. ಪಾದಚಾರಿಗಳು ಮಧ್ಯಪ್ರವೇಶಿಸಿದರೂ, ಯುವಕರು ಅವರಿಗೆ ಬೆದರಿಕೆ ಹಾಕಿದರು ಎಂದು ವರದಿಯಾಗಿದೆ. ಹುಡುಗಿ ಮಾಧ್ಯಮಗಳ ಮುಂದೆ ಮಾತನಾಡಿ ಅವರು ತನ್ನ ಮೇಲೆ ಬಲವಂತವಾಗಿ ದಾಳಿ ಮಾಡಿದಾಗ ತಾನು ವಿರೋಧಿಸಿದ್ದಾಗಿ ತಿಳಿಸಿದ್ದಾರೆ. ವೈರಲ್ ವೀಡಿಯೋ ಮತ್ತು ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಕಾರ್ಯನಿರ್ವಹಿಸಿದ ಸ್ಥಳೀಯ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ದೂರು ದಾಖಲಿಸಲು ಮಹಿಳೆಯನ್ನು ಕರೆಯಲಾಗಿದೆ ಎಂದು ಪೊಲೀಸರು ದೃಢಪಡಿಸಿದ್ದಾರೆ. वो चींखती रही….रहम की गुहार लगाई रही….पर गुंडे को न आया ज़रा भी तरस!#कानपुर में महिला सुरक्षा के दावों को चुनौती देता #VideoViral pic.twitter.com/MXda8F2Ar9 — Himanshu Tripathi (@himansulive) December 16, 2024