ಬೀದಿ ಬದಿಯಲ್ಲಿ ಆಹಾರ ಮಾರಾಟ ಮಾಡುವವರು ಬಡವರು ಎಂದುಕೊಂಡಿರ್ತೇವೆ. ಆದ್ರೆ ಎಲ್ಲರ ವಿಷ್ಯದಲ್ಲಿ ಇದು ಸತ್ಯವಾಗಿರುವುದಿಲ್ಲ. ಕೆಲವರು ಇದೇ ಉದ್ಯೋಗದಿಂದ ಲಕ್ಷಾಂತರ ರೂಪಾಯಿ ಗಳಿಸಿರ್ತಾರೆ. ಇದಕ್ಕೆ ಉತ್ತರ ಪ್ರದೇಶದ ಕಾನ್ಪುರ ಉತ್ತಮ ನಿದರ್ಶನ. ಕಾನ್ಪುರದ ಡಾಟಾ ಸಾಫ್ಟವೇರ್, ತೆರಿಗೆ ಇಲಾಖೆ, ಜಿಎಸ್ಟಿ ನೋಂದಣಿ ತನಿಖೆಯಲ್ಲಿ ಆಘಾತಕಾರಿ ಸಂಗತಿ ಹೊರ ಬಿದ್ದಿದೆ.
ಕಾನ್ಪುರದ ಬೀದಿಗಳಲ್ಲಿ ಗರಿಗರಿಯಾದ ಚಾಟ್ ಮತ್ತು ಸಮೋಸಾ, ಪಾನ್ ಮಾರಾಟ ಮಾಡುವ 256 ಜನರು ಕೋಟ್ಯಾಧಿಪತಿಗಳು ಎಂಬ ಸಂಗತಿ ಹೊರ ಬಿದ್ದಿದೆ. ಅನೇಕ ವ್ಯಾಪಾರಿಗಳ ಬಳಿ ಮೂರು ಕಾರುಗಳ ಜೊತೆಗೆ ಕೋಟಿ ಮೌಲ್ಯದ ಆಸ್ತಿ ಇದೆ. ಇವರು ಮಾತ್ರವಲ್ಲ ಕಾನ್ಪುರದ ಸಣ್ಣ ಕಿರಾಣಿ ಮತ್ತು ಔಷಧಿ ವ್ಯಾಪಾರಿಗಳೂ ಕೋಟಿ ಕೋಟಿ ಗಳಿಸಿದ್ದಾರೆ. ಹಣ್ಣು ಮಾರಾಟಗಾರರ ಬಳಿ ಕೋಟ್ಯಾಂತರ ರೂಪಾಯಿ ಮೌಲ್ಯದ ಆಸ್ತಿಯಿದೆ.
ಕೋಟ್ಯಾಂತರ ರೂಪಾಯಿ ಗಳಿಸುತ್ತಿರುವ ವ್ಯಾಪಾರಿಗಳು, ಆದಾಯ ತೆರಿಗೆ ಇಲಾಖೆಗೆ ಒಂದೇ ಒಂದು ರೂಪಾಯಿ ನೀಡುತ್ತಿಲ್ಲ. ಬಿಗ್ ಡಾಟಾ ಸಾಫ್ಟ್ ವೇರ್, ಆದಾಯ ತೆರಿಗೆ ಇಲಾಖೆ ಮತ್ತು ಜಿಎಸ್‌ಟಿ ನೋಂದಣಿಯ ತನಿಖೆಯಲ್ಲಿ ಕಾನ್ಪುರದ 256 ವ್ಯಾಪಾರಿಗಳು ಕೋಟ್ಯಾಧಿಪತಿಗಳು ಎಂಬುದು ಗೊತ್ತಾಗಿದೆ.