ಕಾಜಲ್ ಅಗರ್ವಲ್ ಅವರ ಪಾತ್ರವನ್ನು ಪರಿಚಯಿಸಿದ ‘ಕಣ್ಣಪ್ಪ’ ಚಿತ್ರ ತಂಡ 06-01-2025 5:06PM IST / No Comments / Posted In: Featured News, Live News, Entertainment ಮುಕೇಶ್ ಕುಮಾರ್ ಸಿಂಗ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಬಹು ನಿರೀಕ್ಷಿತ ಚಿತ್ರ ಈಗಾಗಲೇ ಸಾಕಷ್ಟು ನಿರೀಕ್ಷೆ ಮಾಡಿಸಿದ್ದು ಕಾಜಲ್ ಅಗರ್ವಾಲ್ ಅವರ ಪಾತ್ರವನ್ನು ಪರಿಚಯಿಸಲಾಗಿದೆ. ಈ ಚಿತ್ರದಲ್ಲಿ ಕಾಜಲ್ ಅಗರ್ವಾಲ್ ಪಾರ್ವತಿ ದೇವಿಯಾಗಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು ಚಿತ್ರತಂಡ ಇಂದು ಇವರ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಪಾತ್ರವನ್ನು ರಿವೀಲ್ ಮಾಡಿದೆ. ಈ ಚಿತ್ರವನ್ನು AVA ಎಂಟರ್ಟೈನ್ಮೆಂಟ್ ಫ್ರೇಮ್ಸ್ ಫ್ಯಾಕ್ಟರಿ ಬ್ಯಾನರ್ ನಲ್ಲಿ ಮೋಹನ್ ಬಾಬು ನಿರ್ಮಾಣ ಮಾಡಿದ್ದು, ವಿಷ್ಣು ಮಿಂಚು ಸೇರಿದಂತೆ ಮೋಹನ್ ಬಾಬು, ಆರ್. ಶರತ್‌ಕುಮಾರ್, ಮಧು, ಮುಖೇಶ್ ರಿಷಿ, ಬ್ರಹ್ಮಾಜಿ, ಕರುಣಾಸ್, ಬ್ರಹ್ಮಾನಂದಂ, ಯೋಗಿ ಬಾಬು, ರಘು ಬಾಬು, ಐಶ್ವರ್ಯಾ ಭಾಸ್ಕರನ್, ಪ್ರೀತಿ ಮುಖುಂದನ್, ದೇವರಾಜ್, ಶಿವ ಬಾಲಾಜಿ, ಅಚ್ಯುತ್ ಕುಮಾರ್, ಅರ್ಪಿತ್ ರಂಕಾ, ಬಣ್ಣ ಹಚ್ಚಿದ್ದಾರೆ. ಇನ್ನುಳಿದಂತೆ ಮೋಹನ್ ಲಾಲ್, ಪ್ರಭಾಸ್, ಅಕ್ಷಯ್ ಕುಮಾರ್, ಹಾಗೂ ಕಾಜಲ್ ಅಗರ್ವಾಲ್ ಅತಿಥಿ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಸ್ಟೀಫನ್ ದೇವಸ್ಸಿ ಸಂಗೀತ ಸಂಯೋಜನೆ ನೀಡಿದ್ದು, ಆಂಟನಿ ಸಂಕಲನ, ಹಾಗೂ ಶೆಲ್ಡನ್ ಚೌ ಅವರ ಛಾಯಾಗ್ರಹಣವಿದೆ. My dream role indeed. Super excited for this one. @iVishnuManchu #Kannappa @akshaykumar 💜 pic.twitter.com/1nnWQTGwBD — Kajal Aggarwal (@MsKajalAggarwal) January 6, 2025