
ಕೋಲಾರ: ನಾಡಿನೆಲ್ಲೆಡೆ ಕನ್ನಡ ರಾಜ್ಯೋತ್ಸವದ ಸಂಭ್ರಮ ಮನೆ ಮಾಡಿದೆ. ಆಯಾ ಜಿಲ್ಲೆಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವರುಗಳು ಧಜಾರೋಹಣ ನೆರವೆರಿಸಿದ್ದಾರೆ. ಧ್ವಜಾರೋಹಣದ ಸಂದರ್ಭದಲ್ಲಿ ಅಚಾತುರ್ಯವೊಂದು ಸಂಭವಿಸಿದ ಘಟನೆ ಕೋಲಾರದಲ್ಲಿ ನಡೆದಿದೆ.
ಧ್ವಜಾರೋಹಣ ಮಾಡುತ್ತಿದ್ದ ಸಂದರ್ಭದಲ್ಲಿ ಕನ್ನಡ ಬಾವುಟ ಕಂಬದಿಂದ ಕೆಳಗೆ ಬಿದ್ದ ಘಟನೆ ಕೋಲಾರ ನಗರದ ಎಂ.ಜಿ.ರಸ್ತೆಯಲ್ಲಿ ರಾಜ್ಯೋತ್ಸವ ಕಾರ್ಯಕ್ರಮದ ವೇಳೆ ನಡೆದಿದೆ.
ಧ್ವಜಾರೋಹಣ ನೆರವೇರಿಸುತ್ತಿದ್ದ ವೇಳೆ ಅಕಸ್ಮಾತ್ ಆಗಿ ಧ್ವಜ ಕೆಳಗೆ ಬಿದ್ದಿದೆ. ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಅಕ್ರಂಪಾಷಾ, ಶಾಸಕರು, ಸಂಸದರು ಭಾಗಿಯಾಗಿದ್ದರು. ತಕ್ಷಣ ಯುವಕನೊಬ್ಬ ಬಾವುಟವನ್ನು ಎತ್ತಿ ಕಂಬ ಹತ್ತಿ ಕನ್ನಡ ಬಾವುಟ ಕಟ್ಟಿದ್ದಾನೆ. ಬಳಿಕ ಧ್ವಜಾರೋಹಣ ನೆರವೇರಿದೆ.