alex Certify ಕನ್ನಡದಲ್ಲಿಯೇ ಪ್ರಿಸ್ಕ್ರಿಪ್ಶನ್ ಬರೆದುಕೊಟ್ಟ ವೈದ್ಯರು: ಜಾಲತಾಣಗಳಲ್ಲಿ ಭಾರಿ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕನ್ನಡದಲ್ಲಿಯೇ ಪ್ರಿಸ್ಕ್ರಿಪ್ಶನ್ ಬರೆದುಕೊಟ್ಟ ವೈದ್ಯರು: ಜಾಲತಾಣಗಳಲ್ಲಿ ಭಾರಿ ವೈರಲ್

ರಾಜ್ಯ ಸರ್ಕಾರ ಕನ್ನಡ ಕಡ್ಡಾಯಗೊಳಿಸಿ ಆದೇಶ ಹೊರಡಿಸಿದ್ದು, ಸರ್ಕಾರಿ ಕಚೇರಿ, ಬ್ಯಾಂಕ್ ಗಳಲ್ಲಿಯೂ ಕನ್ನಡದಲ್ಲಿಯೇ ವ್ಯವಹರಿಸಬೇಕು ಎಂದು ಸೂಚನೆ ನೀಡಲಾಗಿದೆ. ಈ ಬೆಳವಣಿಗೆ ಬೆನ್ನಲ್ಲೇ ವೈದ್ಯರೂ ಕೂಡ ಕನ್ನಡದಲ್ಲಿಯೇ ಔಷಧ ಸಲಹೆ ಚೀಟಿ ಬರೆಯಲಿ ಎಂಬ ಒತ್ತಾಯಗಳು ಕೇಳಿಬಂದಿತ್ತು. ಇದರ ಬೆನ್ನಲ್ಲೇ ಇಲ್ಲೋರ್ವ ವೈದ್ಯರು ಕನ್ನಡದಲ್ಲಿಯೇ ಔಷಧ ಚೀಟಿ ಬರೆದಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.

ವೈದ್ಯರು ಬರೆದುಕೊಡುವ ಪ್ರಿಸ್ಕ್ರಿಪ್ಶನ್ ಅಕ್ಷರಗಳು ಯಾರಿಗೂ ಅರ್ಥವಾಗಲ್ಲ. ಔಷಧಿ ಅಂಗಡಿಯವರನ್ನು ಬಿಟ್ಟರೆ ಸಾಮಾನ್ಯ ಜನರಿಗೆ ಅರ್ಥ ಮಾಡಿಕೊಳ್ಳುವುದು ಸವಾಲಿನ ಕೆಲಸ. ಹಾಗಾಗಿ ವೈದ್ಯರು ಕನ್ನಡದಲ್ಲಿ ಪ್ರಿಸ್ಕ್ರಿಫ್ಶನ್ ಬರೆದರೆ ಎಲ್ಲರಿಗೂ ಅರ್ಥವಾಗುತ್ತದೆ ಎಂಬ ಮಾತು ಕೇಳಿಬಂದಿತ್ತು. ಇದೀಗ ಕೆ.ವಿ.ಡೆಂಟಲ್ ಕ್ಲಿನಿಕ್ ನ ಡಾ. ಹರಿಪ್ರಸಾದ್ ಸಿ.ಎಸ್ ರೋಗಿಯೊಬ್ಬರಿಗೆ ಕನ್ನಡದಲ್ಲಿಯೇ ಔಷಧಿ ಚೀಟಿ ಬರೆದುಕೊಟ್ಟಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡದ ಪ್ರಿಸ್ಕ್ರಿಪ್ಶನ್ ಸಾಕಷ್ಟು ವೈರಲ್ ಆಗಿದೆ. ಅಲ್ಲದೇ ಎಲ್ಲ ವೈದ್ಯರು ಕನ್ನಡದಲ್ಲಿಯೇ ಸಲಹಾ ಚೀಟಿ ಬರೆಯಲಿ. ಮದ್ದಿನ ವ್ಯಾಪಾರಿಗಳು ಕನ್ನಡದಲ್ಲೆ ಮದ್ದಿನ ವಿವರ ಮುದ್ರಿಸಲಿ ಎಂಬ ಅಭಿಪ್ರಾಯವನ್ನು ಹಲವರು ವ್ಯಕ್ತಪಡಿಸಿದ್ದಾರೆ.

ಕನ್ನಡದಲ್ಲಿ ಮದ್ದನ್ನು ಬರೆದುಕೊಟ್ಟಿರುವ ಡಾ ಹರಿಪ್ರಸಾದ್ ರವರಿಗೆ ಧನ್ಯವಾದಗಳು. ಬಹುಶಃ ಕನ್ನಡದಲ್ಲಿ ( prescription ) ಪ್ರಿಸ್ಕ್ರಿಪ್ಶನ್ ಬರೆದು ಕೊಟ್ಟ ಮೊದಲ ವೈದ್ಯರು ಇವರೇ ಇರಬಹುದೇನೋ. ನಮ್ಮ ನುಡಿಯಲ್ಲಿ ಇದ್ದರೆ ಬಹಳ ಚೆನ್ನಾಗಿ ಅರ್ಥ ಆಗುತ್ತೆ.. ಎಂದು ಹಲವರು ಕಮೆಂಟ್ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...