ಬೆಂಗಳೂರು : ಕನ್ನಡ ನಾಮ ಫಲಕಗಳಿಲ್ಲದ ಅಂಗಡಿಗಳ ವಿರುದ್ಧ ಬಿಬಿಎಂಪಿ ಕ್ರಮ ಕೈಗೊಂಡಿದ್ದು, 18 ಸಾವಿರ ಅಂಗಡಿಗಳಿಗೆ ನೋಟಿಸ್ ನೀಡಿದೆ.
ನಗರದಲ್ಲಿ 18,000 ಕ್ಕೂ ಹೆಚ್ಚು ವ್ಯಾಪಾರಿಗಳಿಗೆ ವಾಣಿಜ್ಯ ಅಂಗಡಿಗಳ ನಾಮಫಲಕಗಳಲ್ಲಿ 60% ರಷ್ಟು ಕನ್ನಡ ಬಳಕೆ ಇಲ್ಲ ಎಂದು ಬಿಬಿಎಂಪಿ ನೋಟಿಸ್ ನೀಡಿದೆ.
ಕಳೆದ ಒಂದು ವಾರದಿಂದ ಬಿಬಿಎಂಪಿ ಆರೋಗ್ಯಾಧಿಕಾರಿಗಳು ಹಲವು ಕಡೆ ತಪಾಸಣೆ ನಡೆಸಿದ್ದು, ಬೆಂಗಳೂರಿನ ವಿವಿಧ ಕಡೆ 18,886 ವಾಣಿಜ್ಯ ವ್ಯಾಪಾರಿಗಳಿಗೆ ನೋಟಿಸ್ ನೀಡಿದ್ದಾರೆ. ಬೊಮ್ಮನಹಳ್ಳಿ, ಮಹದೇವಪುರ ಸೇರಿ ಹಲವು ಕಡೆ 3 ಸಾವಿರಕ್ಕೂ ಹೆಚ್ಚು ನೋಟಿಸ್ ನೀಡಲಾಗಿದೆ.ದಕ್ಷಿಣ: 2,838, ಪೂರ್ವ: 2,477, ಬೊಮ್ಮನಹಳ್ಳಿ: 3,881, ದಾಸರಹಳ್ಳಿ: 1,378, ಮಹದೇವಪುರ: 3,442, ಪಶ್ಚಿಮ: 2,718, ಯಲಹಂಕ: 1,828 ಆರ್ ಆರ್ ನಗರ: 324 ಸೇರಿ , 18 ಸಾವಿರ ಅಂಗಡಿಗಳಿಗೆ ನೋಟಿಸ್ ನೀಡಲಾಗಿದೆ.