ಬೆಂಗಳೂರು: ಆಸಕ್ತ ಅನ್ಯ ಭಾಷಿಗರಿಗೆ ಕನ್ನಡ ಕಲಿಕಾ ತರಗತಿ ಮೂಲಕ ಕನ್ನಡ ಕಲಿಸುತ್ತಿದ್ದು, ಉತ್ತಮ ಸ್ಪಂದನೆ ವ್ಯಕ್ತವಾಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ತಿಳಿಸಿದ್ದಾರೆ.
ಕನ್ನಡವು ಮುಕ್ತ ಭಾಷೆಯಾಗಿದೆ. ಅನ್ಯಭಾಷಿಗರಿಂದ ಕನ್ನಡ ಕಲಿಕೆಗೆ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದ್ದು, ಅವರಿಗಾಗಿ ಕನ್ನಡ ಕಲಿಸುವ ಯೋಜನೆ ಆರಂಭಿಸಲಾಗಿದೆ. ಕಲಿಯುವವರು ಯಾವ ಕ್ಷೇತ್ರದಿಂದ ಬಂದಿದ್ದಾರೆ ಎಂದು ತಿಳಿದು, ಅಲ್ಲಿನ ಉದಾಹರಣೆ ಸಹಿತ ಕನ್ನಡ ಕಲಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ಆರ್‌ಬಿಐ ಅಧಿಕಾರಿಗಳು ಉತ್ತಮವಾಗಿ ಕನ್ನಡ ಕಲಿಯುತ್ತಿದ್ದಾರೆ. ಸೂಕ್ತ ಪರಿಕರ ಹಾಗೂ ಕಲಿಸುವವರು ಇರದಿದ್ದರಿಂದ ಕೆಲವರು ಕನ್ನಡ ಕಲಿಯಲು ಮುಂದಾಗಿರಲಿಲ್ಲ. ಈಗ ಆ ಕೊರತೆಯನ್ನು ನಿವಾರಿಸಲು ಕಾರ್ಯಪ್ರವೃತ್ತರಾಗಿದ್ದೇವೆ ಎಂದು ತಿಳಿಸಿದ್ದಾರೆ.