ಬಾಲಿವುಡ್ ನಟಿ, ಕನ್ನಡತಿ ದೀಪಿಕಾ ಪಡುಕೋಣೆ ಗರ್ಭಿಣಿಯಾಗಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ನಟಿ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಮದುವೆಯಾದ ಆರು ವರ್ಷಗಳ ನಂತರ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.
ಇದೀಗ ಹೊಸ ವಿಷ್ಯ ಅಂದರೆ ಅವರು ಬೆಂಗಳೂರಿನಲ್ಲಿಯೇ ಚೊಚ್ಚಲ ಮಗುವಿಗೆ ಜನ್ಮ ನೀಡಲಿದ್ದಾರಂತೆ. ಇಂದಿರಾ ನಗರದಲ್ಲಿರುವ ಮನೆಯಲ್ಲಿ ಅವರು ವಾಸವಿರುವ ನಟಿ ಬೆಂಗಳೂರಿನ ಪ್ರತಿಷ್ಟಿತ ಆಸ್ಪತ್ರೆಯೊಂದರ ನೆರವು ಪಡೆಯಲಿದ್ದಾರಂತೆ.
ಇತ್ತೀಚೆಗೆ ನಟ ರಣವೀರ್ ಸಿಂಗ್ ಅವರು ಪತ್ನಿ ದೀಪಿಕಾ ಪಡುಕೋಣೆ ಅವರು ಗರ್ಭೀಣಿಯಾಗಿರುವ ಕುರಿತು ಸುದ್ದಿಯನ್ನು ಘೋಷಿಸಿದ್ದರು. ಒಟ್ಟಿನಲ್ಲಿ ನಟಿ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ತಮ್ಮ ಮೊದಲ ಮಗುವನ್ನು ಸ್ವಾಗತಿಸಲು ಸಜ್ಜಾಗುತ್ತಿದ್ದಾರೆ.