ಬೆಂಗಳೂರು: ಕಲಾವಿದರಿಗೆ ನೀಡುತ್ತಿರುವ ಮಾಸಾಶನ ಹೆಚ್ಚಳಕ್ಕೆ ಕ್ರಮ ಕೈಗೊಳ್ಳುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಕಲಾವಿದರಿಗೆ ನೀಡುತ್ತಿರುವ ಮಾಸಾಶನ ಮೊತ್ತವನ್ನು 1,000 ರೂ. ಹೆಚ್ಚಳ ಮಾಡಿ 3 ಸಾವಿರ ಮಾಸಾಶನ ನೀಡಲಾಗುವುದು. ಪ್ರಸ್ತುತ 60 ವರ್ಷ ಮೀರಿದ 13,000 ಕಲಾವಿದರಿಗೆ ಮಾಸಿಕ 2,000 ರೂ. ನೀಡುತ್ತಿದ್ದು, ಇದನ್ನು 3000 ರೂ.ಗೆ ಹೆಚ್ಚಳ ಮಾಡುವಂತೆ ಕಲಾವಿದರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಮನವಿ ಮಾಡಿದ್ದರು.
ಸಚಿವ ಶಿವರಾಜ ತಂಗಡಗಿ ಹಲವು ಸಭೆ ನಡೆಸಿ ಮಾಸಾಶನ ಹೆಚ್ಚಳಕ್ಕೆ ಆರ್ಥಿಕ ಇಲಾಖೆಯಿಂದ ಅನುಮತಿ ಪಡೆದು ಮುಂದಿನ ಕ್ರಮಕ್ಕೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಮಾಸಾಶನ ಹೆಚ್ಚಳಕ್ಕೆ ಬೇಕಾಗುವ ಹೆಚ್ಚುವರಿ ಮೊತ್ತ ಸೇರಿ ಇನ್ನಿತರ ಮಾಹಿತಿ ಉಲ್ಲೇಖಿಸಿ ಮತ್ತೊಮ್ಮೆ ಕಡತ ಸಲ್ಲಿಕೆಗೆ ಆರ್ಥಿಕ ಇಲಾಖೆ ಸೂಚನೆ ನೀಡಿದೆ. ಈ ನಿಟ್ಟಿನಲ್ಲಿ ಇನ್ನೆರಡು ದಿನಗಳಲ್ಲಿ ಕಡತ ಸಲ್ಲಿಸಲಾಗುವುದು ಎನ್ನಲಾಗಿದೆ.