alex Certify ರೆಬೆಲ್‌ ಸ್ಟಾರ್‌‌ ಅಂಬರೀಷ್ ಪುತ್ರನ ವಿವಾಹ ನಿಶ್ಚಿತಾರ್ಥಕ್ಕೆ ಡೇಟ್‌ ಫಿಕ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೆಬೆಲ್‌ ಸ್ಟಾರ್‌‌ ಅಂಬರೀಷ್ ಪುತ್ರನ ವಿವಾಹ ನಿಶ್ಚಿತಾರ್ಥಕ್ಕೆ ಡೇಟ್‌ ಫಿಕ್ಸ್

ಅಭಿಷೇಕ್ ಅಂಬರೀಶ್ ಮದುವೆ ಕುರಿತಂತೆ ಸಾಕಷ್ಟು ಊಹಾಪೋಹಗಳು ಓಡಾಡುತ್ತಲೇ ಇದ್ದವು. ಪ್ರತಿ ಬಾರಿ ಮಗನ ಮದುವೆ ವಿಚಾರ ಬಂದಾಗ ಸುಮಲತ ನಕ್ಕು ಸುಮ್ಮನಾಗುತ್ತಿದ್ದರು. ಅಥವಾ ಅಂತದೇನು ಇಲ್ಲ ಅಂತ ಹೇಳ್ತಾ ಇದ್ದರು. ಆದರೆ ಇದೀಗ ಅವರ ಆಪ್ತ ಮೂಲಗಳ ಪ್ರಕಾರ ಮದುವೆ ಮಾತುಕತೆ ಆಗಿದೆ ಅಂತ ಹೇಳಲಾಗುತ್ತಿದೆ.

ಎಸ್, ಇತ್ತೀಚೆಗಷ್ಟೆ ಕಾಳಿ ಸಿನಿಮಾ ಮುಹೂರ್ತ ನೆರವೇರಿಸಿದ ಅಭಿಷೇಕ್ ಅಂಬರೀಶ್ ಇದೀಗ ಮದುವೆಗೂ ಸಜ್ಜಾಗಿದ್ದಾರಂತೆ. ಡಿಸೆಂಬರ್ 11 ರಂದು ಅಭಿಷೇಕ್ ಎಂಗೇಜ್ ಆಗಲಿದ್ದಾರೆ ಎನ್ನಲಾಗುತ್ತಿದೆ. ಖ್ಯಾತ ಫ್ಯಾಷನ್ ಡಿಸೈನರ್ ಪ್ರಸಾದ್ ಬಿದ್ದಪ್ಪ ಅವರು ಪುತ್ರಿ ಅವಿದಾ ಬಿದ್ದಪ್ಪ ಅವರ ಜೊತೆ ಎಂಗೇಜ್ ಆಗಲಿದ್ದಾರಂತೆ ಅಭಿ. ಇಂತದೊಂದು ಸುದ್ದಿ ಅವರ ಆಪ್ತ ವಲಯದಲ್ಲಿ ಓಡಾಡುತ್ತಿದೆ.

ಇನ್ನು, ಹಲವು ವರ್ಷಗಳಿಂದ ಅಭಿಷೇಕ್ ಮತ್ತು ಅವಿದಾ ಫ್ರೆಂಡ್ಸ್ ಅಂತೆ. ಇವರು ಖ್ಯಾತ ಮಾಡೆಲ್. ಈ ಸ್ನೇಹಿತರು ಇದೀಗ ಗಂಡ ಹೆಂಡತಿಯಾಗಲಿದ್ದಾರೆ ಎನ್ನುತ್ತಿವೆ ಮೂಲಗಳು. ನಿಶ್ಚಿತಾರ್ಥ ಸಮಾರಂಭ ಡಿಸೆಂಬರ್ ಎರಡನೇ ವಾರದಲ್ಲಿ ಪ್ಯಾಲೇಸ್ ಗ್ರೌಂಡ್ ನಲ್ಲಿ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಇನ್ನು ಈ ವಿಚಾರಕ್ಕೆ ಅಂಬಿ ಕುಟುಂಬದವರು ಯಾರೂ ಸ್ಪಷ್ಟನೆ ನೀಡಿಲ್ಲ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...