alex Certify ‘ರಿಯಾಲಿಟಿ ಶೋ’ ನಲ್ಲಿ ಸ್ಟಂಟ್ ಮಾಡುವಾಗ ಗಾಯಗೊಂಡ ನಟಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ರಿಯಾಲಿಟಿ ಶೋ’ ನಲ್ಲಿ ಸ್ಟಂಟ್ ಮಾಡುವಾಗ ಗಾಯಗೊಂಡ ನಟಿ

‘ಖತ್ರೋನ್ ಕೆ ಖಿಲಾಡಿ 12’ ರಿಯಾಲಿಟಿ ಶೋನಲ್ಲಿ ಸ್ಪರ್ಧಿಯಾಗಿರುವ ಕನಿಕಾ ಮಾನ್, ಝೀ ಟಿವಿಯ ಶೋ ʼಗುಡ್ಡನ್ ತುಮ್ಸೆ ನಾ ಹೋ ಪಯೇಗಾʼದಲ್ಲಿ ಗುಡ್ಡನ್ ಪಾತ್ರ ನಿರ್ವಹಿಸುವಲ್ಲಿ ಹೆಸರುವಾಸಿಯಾಗಿದ್ದಾರೆ.

ನಟಿ ಕನಿಕಾ ಮಾನ್ ದಕ್ಷಿಣ ಆಫ್ರಿಕಾದ ಕೇಪ್ ಟೌನ್‌ನಲ್ಲಿ ನಡೆಯುತ್ತಿರುವ ರಿಯಾಲಿಟಿ ಶೋ ʼಖತ್ರೋನ್ ಕೆ ಖಿಲಾಡಿ 12ʼ ರ ಚಿತ್ರೀಕರಣದಲ್ಲಿದ್ದು, ಕನಿಕಾ ನಗುತ್ತಿರುವ ತಮ್ಮ ಫೋಟೋವನ್ನು ಇನ್ ಸ್ಟಾದಲ್ಲಿ ಹಂಚಿಕೊಂಡಿದ್ದಾರೆ.

ಫೋಟೋದಲ್ಲಿ ಕನಿಕಾ ಅವರ ತೋಳು ಜಜ್ಜಿದಂತೆ ತೋರುತ್ತಿದೆ, ಮೊಣಕಾಲುಗಳಲ್ಲಿ ಅನೇಕ ಸ್ಕ್ರಾಚಸ್ ಕಾಣಿಸುತ್ತಿದ್ದರೂ ಕ್ಯಾಮೆರಾಗೆ ಪೋಸ್ ನೀಡುವಾಗ ನಗುತ್ತಿರುವುದನ್ನು ಕಾಣಬಹುದು.

ʼಗೊಬ್ಬರ’ ಕೇಳಿದ ರೈತನಿಗೆ ಕೇಂದ್ರ ಸಚಿವರಿಂದ ಹಿಗ್ಗಾಮುಗ್ಗಾ ತರಾಟೆ

ಹಲವು ಅಭಿಮಾನಿಗಳು ಫೋಟೋಗೆ ಪ್ರತಿಕ್ರಿಯಿಸಿ, ಬೇಗ ಗುಣಮುಖರಾಗುವಂತೆ ಹಾರೈಸಿದ್ದಾರೆ. “OMG ! ಏನಾಯಿತು ?” ಎಂದು ಒಬ್ಬರು ಪ್ರಶ್ನಿಸಿದ್ದಾರೆ

ಅಕೆ ಮಾಧ್ಯಮಗಳಿಗೆ ನೀಡಿದ ಸಂದರ್ಶನದಲ್ಲಿ, ನನಗೆ ಕೆಲವು ಗಾಯಗಳಾಗಿವೆ. ʼಖತ್ರೋನ್ ಕೆ ಖಿಲಾಡಿʼಯಲ್ಲಿ ಪ್ರಬಲ ಸ್ಪರ್ಧಿ ಎಂದು ತೋರಿಸಲು ಗಾಯಗೊಂಡರೂ ಅಭ್ಯಂತರ ಇಲ್ಲ ಎಂದು ಹೇಳಿಕೊಂಡಿದ್ದಾರೆ.

ಜಿಸ್ಕಾ ಪೇರ್ ಭೀ ಟೂಟಾ ಹೋತಾ ಹೈ ನಾ ವೋ ದೌಡ್ನೆ ಲಗ್ ಜಾಯೆ (ಕಾಲು ಮುರಿದಿರುವ ಯಾರಾದರೂ ಓಡಲು ಪ್ರಾರಂಭಿಸಬಹುದು), ಇತರ ಸ್ಪರ್ಧಿ ಉತ್ತಮ ಪ್ರದರ್ಶನ ಮಾಡಿದ್ದಾರೆ ಎಂದು ಭಾವಿಸಿದರೆ, ನಾವು ಹೆಚ್ಚು ಚಾರ್ಜ್ ಆಗುತ್ತೇವೆ. ಆ ಸಮಯದಲ್ಲಿ ನಮ್ಮ ನೋವಿನ ಗಾಯಗಳ ಬಗ್ಗೆ ನಾವು ಮರೆತುಬಿಡುತ್ತೇವೆ ಎಂದರು.

ಒಮ್ಮೆ ಸಾಹಸ ಚಟುವಟಿಕೆ ಪೂರ್ಣಗೊಳಿಸಿದಾಗ, ನನ್ನ ಕೈ, ಕಾಲಿಗೆ ನೋವಾಗಿದೆ ಎಂದು ಅರಿವಾಯಿತು. ನಾನು ನನ್ನ ಗಾಯಗಳ ಚಿತ್ರಗಳನ್ನು ಕ್ಲಿಕ್ ಮಾಡಿ ಅವುಗಳನ್ನು ನನ್ನ ಕುಟುಂಬಕ್ಕೆ ಕಳುಹಿಸುತ್ತೇನೆ. ಈ ಹಂತದವರೆಗೆ ತಲುಪಲು ಯಶಸ್ವಿಯಾಗಿದ್ದೇನೆ, ಸಮರ್ಥಳಾಗಿದ್ದೇನೆ ಎಂದಿದ್ದಾರೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...