alex Certify ಸರ್ಕಾರದ ಹೊಸ ಯೋಜನೆಗೆ ರಾಯಭಾರಿಯಾಗಿ ಕಂಗನಾ ರಣಾವತ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸರ್ಕಾರದ ಹೊಸ ಯೋಜನೆಗೆ ರಾಯಭಾರಿಯಾಗಿ ಕಂಗನಾ ರಣಾವತ್​

ಉತ್ತರ ಪ್ರದೇಶ ಸರ್ಕಾರ ಹೊಸ ಯೋಜನೆಯಾದ ‘ಒಂದು ಜಿಲ್ಲೆ – ಒಂದು ಉತ್ಪನ್ನ’ ರಾಯಭಾರಿಯಾಗಿ ಬಾಲಿವುಡ್​ ನಟಿ ಕಂಗನಾ ರಣಾವತ್​ ಆಯ್ಕೆಯಾಗಿದ್ದಾರೆ. ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್​ ನಿವಾಸಕ್ಕೆ ಕಂಗನಾ ರಣಾವತ್​ ತಡರಾತ್ರಿ ಭೇಟಿ ನೀಡಿದ ಬೆನ್ನಲ್ಲೇ ಈ ಮಹತ್ವದ ಘೋಷಣೆಯನ್ನು ಮಾಡಲಾಗಿದೆ.

ಉತ್ತರ ಪ್ರದೇಶದ 75 ಜಿಲ್ಲೆಗಳಲ್ಲಿ ನಿರ್ದಿಷ್ಟ ಸಾಂಪ್ರದಾಯಿಕ ಕೈಗಾರಿಕಾ ಕೇಂದ್ರಗಳನ್ನು ರಚಿಸುವ ಉದ್ದೇಶದಿಂದ ‘ ಒಂದು ಜಿಲ್ಲೆ – ಒಂದು ಉತ್ಪನ್ನ’ ಎಂಬ ಯೋಜನೆಯನ್ನು ಜಾರಿಗೆ ತರಲಾಗಿದೆ. ಟ್ವಿಟರ್​ನಲ್ಲಿ ಶಾಶ್ವತವಾಗಿ ಬ್ಯಾನ್​ ಆಗಿರುವ ನಟಿ ಕಂಗನಾ ರಣಾವತ್​, ಈ ವಿಚಾರವನ್ನು ಇನ್​ಸ್ಟಾಗ್ರಾಂನಲ್ಲಿ ಶೇರ್​ ಮಾಡಿದ್ದಾರೆ.

BIG NEWS: ಸರ್ಕಾರದಿಂದ ಹೊಸ ನಿಯಮ – ಇನ್ಮುಂದೆ ಇವರುಗಳಿಗೆ ಸಿಗೋಲ್ಲ ‌ʼಸಿಮ್‌ʼ ಕಾರ್ಡ್

ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್​ರೊಂದಿಗಿನ ಮಾತುಕತೆಯನ್ನು ಸ್ಮರಣೀಯ ಎಂದಿರುವ ನಟಿ ಕಂಗನಾ ಮುಂಬರುವ ವಿಧಾನಸಭಾ ಚುನಾವಣೆಗೆ ಯೋಗಿ ಆದಿತ್ಯನಾಥ್​ಗೆ ಶುಭ ಕೋರಿದ್ದಾರೆ. ಅಲ್ಲದೇ ಯೋಗಿ ಆದಿತ್ಯನಾಥ್​​ ತಮಗೆ ರಾಮ ಜನ್ಮ ಭೂಮಿ ಬಳಸಲಾಗಿದ್ದ ಬೆಳ್ಳಿಯ ನಾಣ್ಯವನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂಬ ವಿಚಾರವನ್ನೂ ಹಂಚಿಕೊಂಡಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...