ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಜೈಲಿನಲ್ಲಿದ್ದಾನೆ. ಬಾಲಿವುಡ್ ನಲ್ಲಿ ಯಾವುದೇ ಘಟನೆ ನಡೆದರೂ ಅದಕ್ಕೆ ನಟಿ ಕಂಗನಾ ರಣಾವತ್ ಪ್ರತಿಕ್ರಿಯೆ ನೀಡ್ತಾರೆ. ಆರ್ಯನ್ ಪ್ರಕರಣದ ಬಗ್ಗೆ ನಿರಂತರ ಪ್ರತಿಕ್ರಿಯೆ ನೀಡ್ತಿರುವ ಕಂಗನಾ ಈಗ ಮತ್ತೊಂದು ಪೋಸ್ಟ್ ಹಾಕಿ ಶಾರುಖ್ ಅಭಿಮಾನಿಗಳ ಕಣ್ಣು ಕೆಂಪು ಮಾಡಿದ್ದಾರೆ.
ಇನ್ಸ್ಟಾಗ್ರಾಮ್ ನಲ್ಲಿ ಕಂಗನಾ, ಜಾಕಿ ಚಾನ್ ಹಾಗೂ ಅವರ ಮಗನ ಫೋಟೋ ಹಂಚಿಕೊಂಡಿದ್ದಾರೆ. ಅದ್ರ ಮೇಲೆ ‘ಜಾಕಿ ಚಾನ್ ತಮ್ಮ ಮಗನನ್ನು 2014 ರಲ್ಲಿ ಡ್ರಗ್ ಪ್ರಕರಣದಲ್ಲಿ ಬಂಧಿಸಿದಾಗ, ಅಧಿಕೃತವಾಗಿ ಕ್ಷಮೆ ಯಾಚಿಸಿದ್ದರು. ಮಗನ ಕೆಲಸ ನನಗೆ ನಾಚಿಕೆ ತಂದಿದೆ. ಇದು ನನ್ನ ವೈಫಲ್ಯ. ಆತನನ್ನು ರಕ್ಷಿಸಲು ನಾನು ಮಧ್ಯಪ್ರವೇಶಿಸುವುದಿಲ್ಲ ಎಂದಿದ್ದರು. ಮಗನಿಗೆ 6 ತಿಂಗಳು ಜೈಲು ಶಿಕ್ಷೆಯಾಗಿತ್ತು’ ಎಂದು ಕಂಗನಾ ಪೋಸ್ಟ್ ಮಾಡಿದ್ದಾರೆ. ಅಷ್ಟೇ ಅಲ್ಲ, ಸುಮ್ಮನೆ ಹೇಳ್ತಿದ್ದೇನೆಂದು ಅದ್ರ ಕೆಳಗೆ ಬರೆದಿದ್ದಾರೆ.
ಕಂಗನಾ ಈ ಫೋಸ್ಟ್ ವೈರಲ್ ಆಗಿದೆ. ಕಂಗನಾ, ಶಾರುಖ್ ಖಾನ್ ರಿಗೆ ನಿಂದಿಸುತ್ತಿದ್ದಾರೆಂದು ಅನೇಕರು ಕಮೆಂಟ್ ಮಾಡಿದ್ದಾರೆ. ಕೆಲವರು ಕಂಗನಾ ಸಮರ್ಥನೆಗೆ ಬಂದ್ರೆ ಮತ್ತೆ ಕೆಲವರು ಕಂಗನಾ ಪೋಸ್ಟ್ ಖಂಡಿಸಿದ್ದಾರೆ.