
ಪ್ಯಾರಿಸ್ ಒಲಿಂಪಿಕ್ಸ್ 2024 ರ 50 ಕೆಜಿ ಮಹಿಳಾ ಕುಸ್ತಿ ವಿಭಾಗದಲ್ಲಿ ವಿನೇಶ್ ಫೋಗಟ್ ಅವರ ಐತಿಹಾಸಿಕ ಗೆಲುವು ಎಲ್ಲರ ಗಮನ ಸೆಳೆಯಿತು. ಒಲಿಂಪಿಕ್ ಇತಿಹಾಸದಲ್ಲಿ ಭಾರತದ ಮಹಿಳಾ ಕುಸ್ತಿಪಟು ಫೈನಲ್‌ಗೆ ಪ್ರವೇಶಿಸಿದ್ದು ಇದೇ ಮೊದಲು.
ವಿನೇಶ್ ಗೆಲುವಿಗೆ ಚಿತ್ರರಂಗದ ಹಲವು ತಾರೆಯರು ಅಭಿನಂದನೆ ಸಲ್ಲಿಸುತ್ತಿದ್ದಾರೆ. ಇವರಲ್ಲಿ ನಟಿ ಮತ್ತು ಸಂಸದೆ ಕಂಗನಾ ರಣಾವತ್ ಸೇರಿದ್ದಾರೆ. ವಿನೇಶ್ ಸೆಮಿಫೈನಲ್‌ನಲ್ಲಿ ಕ್ಯೂಬಾದ ಯುಸ್ನೆಲಿಸ್ ಗುಜ್ಮನ್ ಅವರನ್ನು 5-0 ಅಂತರದಿಂದ ಸೋಲಿಸಿ ಫೈನಲ್‌ಗೆ ಲಗ್ಗೆ ಇಟ್ಟರು. ವಿನೇಶ್‌ಗೆ ಚಿನ್ನದ ಪದಕ ಗೆಲ್ಲುವ ಅವಕಾಶವಿದೆ.
ಈ ಸಂದರ್ಭದಲ್ಲಿ ನಟಿ ಕಂಗನಾ ರಣಾವತ್ ಅವರು ವಿನೇಶ್ ಅವರ ಪ್ರತಿಭಟನೆ ನೆನೆಪಿಸಿಕೊಳ್ತಲೆ ಅವರನ್ನು ಶ್ಲಾಘಿಸಿದ್ದಾರೆ. ಅವರ ಗೆಲುವಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಕಂಗನಾ ಭಾರತದ ಮೊದಲ ಚಿನ್ನದ ಪದಕಕ್ಕೆ ಫ್ರಿಂಗರ್ ಕ್ರಾಸ್. ವಿನೇಶ್ ಫೋಗಟ್ ಒಮ್ಮೆ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಮೋದಿ ನಿಮ್ಮ ಸಮಾಧಿ ತೆಗೆಯುತ್ತೇನೆ ಎಂಬ ಘೋಷಣೆ ಕೂಗಿದ್ದರು. ಇಷ್ಟರ ಮಧ್ಯೆಯೂ ಅವರಿಗೆ ದೇಶದ ಪರ ಆಡುವ ಅವಕಾಶ ನೀಡಲಾಯಿತು. ಅತ್ಯುತ್ತಮ ತರಬೇತಿ, ತರಬೇತುದಾರರು ಮತ್ತು ಸೌಲಭ್ಯಗಳು ಈ ಸಾಧನೆಗೆ ಕಾರಣ. ಇದು ಪ್ರಜಾಪ್ರಭುತ್ವದ ಸೌಂದರ್ಯ ಮತ್ತು ಶ್ರೇಷ್ಠ ನಾಯಕನಿಗೆ ಉದಾಹರಣೆ ಎಂದು ಕಂಗನಾ ಬರೆದಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಕಂಗನಾ ಈ ಮಾತಿಗೆ ಸಾಕಷ್ಟು ಪ್ರತಿಕ್ರಿಯೆ ಬಂದಿದೆ. ಕೆಲವರು ಪರ ಮಾತನಾಡಿದ್ರೆ ಮತ್ತೆ ಕೆಲವರು ಈ ಪೋಸ್ಟ್ ವಿರೋಧಿಸಿದ್ದಾರೆ.