ನವದೆಹಲಿ: ಇಂದಿರಾಗಾಂಧಿಯವರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ 1975ರ ಜೂನ್ 25ರಿಂದ 1977ರ ಮಾರ್ಚ್ 21ರವರೆಗೆ ದೇಶದಲ್ಲಿ ಹೇರಲಾದ ತುರ್ತು ಪರಿಸ್ಥಿತಿಯ ಕರಾಳ ದಿನಗಳ ಕುರಿತ ಕಥೆಯುಳ್ಳ ‘ಎಮೆರ್ಜೆನ್ಸಿ’ ಚಿತ್ರದ ಚಿತ್ರೀಕರಣಕ್ಕೆ ಲೋಕಸಭೆ ಸಚಿವಾಲಯದಿಂದ ಅನುಮತಿ ಕೋರಲಾಗಿದೆ.
ಈ ಚಿತ್ರದ ನಿರ್ದೇಶಕಿಯೂ ಆಗಿರುವ ನಟಿ ಕಂಗನಾ ರಣಾವತ್ ಸಂಸತ್ತಿನ ಆವರಣದಲ್ಲಿ ಚಿತ್ರೀಕರಣ ಮಾಡಲು ಈ ಅನುಮತಿಯನ್ನು ಕೋರಿದ್ದಾರೆ. 21 ತಿಂಗಳ ಅವಧಿಯಲ್ಲಿ ಜನರ ಮೂಲಭೂತ ಹಕ್ಕುಗಳ ಮೇಲೆ ಹೇಗೆ ನಿರ್ಬಂಧಗಳನ್ನು ಹೇರಲಾಯಿತು ಎಂಬ ವಿಷಯ ಈ ಚಿತ್ರದಲ್ಲಿದೆ. ಆದರೆ ಇಲ್ಲಿ ಚಿತ್ರೀಕರಣಕ್ಕೆ ಇನ್ನೂ ಅನುಮತಿ ಸಿಗಲಿಲ್ಲ. ಕಂಗನಾ ಅವರ ಪತ್ರವು ಪರಿಗಣನೆಯಲ್ಲಿದೆ ಎನ್ನಲಾಗಿದೆ.
ಸಾಮಾನ್ಯವಾಗಿ, ಖಾಸಗಿ ಸಂಸ್ಥೆಗಳಿಗೆ ಸಂಸತ್ತಿನ ಸಂಕೀರ್ಣದೊಳಗೆ ಚಿತ್ರೀಕರಣ ಮಾಡಲು ಅಥವಾ ವಿಡಿಯೋಗಳನ್ನು ಮಾಡಲು ಅನುಮತಿ ನೀಡಲಾಗುವುದಿಲ್ಲ. ಆದ್ದರಿಂದ ಕಂಗನಾ ಅವರಿಗೂ ಅನುಮತಿ ಸಿಗುವುದು ಕಷ್ಟ ಎನ್ನಲಾಗುತ್ತಿದೆ.
ಈ ವರ್ಷ ಜೂನ್‌ನಲ್ಲಿ ‘ಎಮೆರ್ಜೆನ್ಸಿ’ಯ ಚಿತ್ರೀಕರಣ ಪ್ರಾರಂಭವಾಯಿತು. ಚಿತ್ರದ ನಿರ್ದೇಶಕಿಯೂ ಆಗಿರುವ ಕಂಗನಾ ಅವರೇ ಚಿತ್ರದ ಬರಹಗಾರರು ಮತ್ತು ನಿರ್ಮಾಪಕರು. 1975ರಲ್ಲಿ ದೇಶದಲ್ಲಿ ತುರ್ತುಪರಿಸ್ಥಿತಿ ಹೇರಿದ ಮಾಜಿ ಪ್ರಧಾನಿ ಇಂದಿರಾಗಾಂಧಿ ಪಾತ್ರದಲ್ಲಿ ಅವರು ನಟಿಸುತ್ತಿದ್ದಾರೆ.
https://www.instagram.com/p/Cf-rnETBRiz/?utm_source=ig_embed&ig_rid=7a5639e5-5a3b-4963-bcd2-c85b4ca8463a
https://www.instagram.com/reel/CgBAGqLBQJY/?utm_source=ig_embed&ig_rid=3f97b821-26a3-4eae-97af-874ff0e9692e