ವಿವಾದಗಳಿಂದಲೇ ಹೆಸರು ಮಾಡುವ ಬಾಲಿವುಡ್ ನಟಿ ಕಂಗನಾ ಇದೀಗ ಮಹಾತ್ಮ ಗಾಂಧಿ ವಿರುದ್ಧ ಹೇಳಿಕೆ ಕೊಟ್ಟು ಸಾಮಾಜಿಕ ಜಾಲತಾಣದಲ್ಲಿ ಎಡ-ಬಲಗಳ ತಿಕ್ಕಾಟಕ್ಕೆ ಮತ್ತೊಮ್ಮೆ ಆಸ್ಪದ ನೀಡಿದ್ದಾರೆ.
ಆಧುನಿಕ ಭಾರತದ ಸ್ವಾತಂತ್ರ‍್ಯ ಸಂಗ್ರಾಮದ ಬಗ್ಗೆ ಮನಸೋಯಿಚ್ಛೆ ಹೇಳಿಕೆ ಕೊಟ್ಟು, ಅದಕ್ಕೆ ಸಮರ್ಥನೆಗಳನ್ನು ಕೊಡುತ್ತಾ ಕಳೆದ 4-5 ದಿನಗಳಿಂದ ಸುದ್ದಿ ಮಾಡುತ್ತಿರುವ ಪದ್ಮಶ್ರೀ ಪುರಸ್ಕೃತ ನಟಿ ಕಂಗನಾ ಹಳೆಯ ಸುದ್ದಿ ಪತ್ರಿಕೆಯೊಂದರಲ್ಲಿ ಬಂದಿದ್ದ ಸುದ್ದಿ ಹಂಚಿಕೊಂಡು, “ನೀವು ಗಾಂಧಿ ಅಥವಾ ನೇತಾಜಿ ಬೆಂಬಲಿಗರಿರಬಹುದು. ನೀವು ಎರಡೂ ಆಗಿರಲು ಸಾಧ್ಯವಿಲ್ಲ, ಆಯ್ಕೆ ಮಾಡಿ ನಿರ್ಧರಿಸಿ,” ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಜೀವನದಲ್ಲಿ ಪ್ರೀತಿ ದುಪ್ಪಟ್ಟು ಮಾಡುತ್ತೆ ʼಫೆಂಗ್ ಶುಯಿʼ ಉಪಾಯ
ಇನ್‌ಸ್ಟಾಗ್ರಾಂನಲ್ಲಿ ತಮ್ಮ ಸ್ಟೋರಿಗಳನ್ನು ಹಂಚಿಕೊಳ್ಳುವ ಕಂಗನಾ, “ಯಾರಾದರೂ ನಿಮಗೆ ಬಾರಿಸಿದರೆ ಮತ್ತೊಂದು ಕೆನ್ನೆಯನ್ನು ಕೊಟ್ಟು ಅದಕ್ಕೂ ಬಾರಿಸಲು ಹೇಳಿ ಎನ್ನುವ ಮಂದಿ ನಮಗೆ ಸ್ವಾತಂತ್ರ‍್ಯ ತಂದುಕೊಟ್ಟರು ಎಂದು ಹೇಳಿಕೊಡಲಾಗಿದೆ. ಸ್ವಾತಂತ್ರ‍್ಯ ಪಡೆದುಕೊಳ್ಳುವುದು ಹಾಗಲ್ಲ. ಹಾಗೆ ಮಾಡುವುದರಿಂದ ಭಿಕ್ಷೆ ಪಡೆಯಬಹುದು ಅಷ್ಟೇ. ನಿಮ್ಮ ಹೀರೋಗಳನ್ನು ಜಾಣತನದಿಂದ ಆಯ್ದುಕೊಳ್ಳಿ,” ಎಂದು ಕಂಗನಾ ಹೇಳಿಕೊಂಡಿದ್ದಾರೆ.
“ಭಗತ್ ಸಿಂಗ್‌ರನ್ನು ನೇಣಿಗೇರಿಸುವುದು ಗಾಂಧೀಜಿಗೆ ಬೇಕಾಗಿತ್ತು ಎಂದು ತೋರಲು ಸಾಕ್ಷ್ಯಗಳಿವೆ….. ಹಾಗಾಗಿ ನೀವು ಯಾರಿಗೆ ಬೆಂಬಲ ನೀಡುತ್ತೀರಿ ಎಂಬುದನ್ನು ಆಯ್ದುಕೊಳ್ಳಲು ಹಾಗೂ ನಿಮ್ಮ ಸ್ಮರಣಾ ಪಟ್ಟಿಯಲ್ಲಿ ಅವರನ್ನೆಲ್ಲಾ ಒಂದೇ ಕಡೆ ಸೇರಿಸಿ, ಅವರೆಲ್ಲರ ಜಯಂತಿಗಳಿಗೆ ವಿಶ್ ಮಾಡುವುದು ಸಾಲುವುದಿಲ್ಲ. ಹೀಗೆ ಮಾಡುವುದು ಬರೀ ಮೂರ್ಖತನ ಮಾತ್ರವಲ್ಲ, ಬೇಜವಾಬ್ದಾರಿಯುತವಾದದ್ದು. ಇತಿಹಾಸ ಹಾಗೂ ಹೀರೋಗಳ ಬಗ್ಗೆ ಸರಿಯಾಗಿ ತಿಳಿದುಕೊಳ್ಳಬೇಕಾದ ಅಗತ್ಯವಿದೆ,” ಎಂದು ಬರೆದುಕೊಂಡಿದ್ದಾರೆ.
ಚಳಿಗಾಲಕ್ಕೆ ಫ್ಯಾಷನ್ ʼಟಿಪ್ಸ್ʼ
“1947ರಲ್ಲಿ ನಮಗೆ ಸಿಕ್ಕಿದ್ದು ಭಿಕ್ಷೆ, ಅಸಲೀ ಸ್ವಾತಂತ್ರ‍್ಯ ಸಿಕ್ಕಿದ್ದು 2014ರಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ,” ಎಂದು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನವೊಂದರಲ್ಲಿ ಹೇಳುವ ಮೂಲಕ ಕಂಗನಾ ಭಾರೀ ಚರ್ಚೆಗೆ ಗ್ರಾಸವಾಗಿದ್ದರು.