ನಟ ನವಾಜುದ್ದೀನ್ ಸಿದ್ದಿಕಿ ಅವರ ವೃತ್ತಿಜೀವನದ ಏರುಗತಿಯ ಕಥೆ ಎಲ್ಲರಿಗೂ ಸ್ಫೂರ್ತಿಯಾಗಿದೆ. ಒಂದು ದಶಕಕ್ಕೂ ಹೆಚ್ಚು ಕಾಲ ನಿರಂತರ ಹೋರಾಡಿದ ನಂತರ, ’ಗ್ಯಾಂಗ್ಸ್ ಆಫ್ ವಾಸೇಪುರ್’ ಚಿತ್ರದ ಮೂಲಕ ಬಾಲಿವುಡ್‌ನಲ್ಲಿ ತಮ್ಮದೇ ಸ್ಥಾನ ಕೆತ್ತಿಕೊಂಡಿರುವವರು ನವಾಜುದ್ದೀನ್. ವಿಮರ್ಶಾತ್ಮಕವಾಗಿ ಚಿತ್ರಪ್ರಿಯರ ಮೆಚ್ಚುಗೆ ಪಡೆದ ನಟ ಇತ್ತೀಚೆಗೆ ಬದಲಾವಣೆ ಇರಲೆಂದು ಇಂಟೀರಿಯರ್ ಡಿಸೈನರ್ ಆಗಿದ್ದಾರೆ.
ನವಾಜುದ್ದೀನ್ ಅವರು ಮುಂಬೈನಲ್ಲಿ ಸುಂದರವಾದ ಮಹಲು ನಿರ್ಮಿಸಿದ್ದು ಅವರ ತಂದೆಯ ಹೆಸರು ʼನವಾಬ್ʼ ನ್ನು ಮನೆಗೆ ಹೆಸರಿಸಿದ್ದಾರೆ. ಉತ್ತರ ಪ್ರದೇಶದ ಮುಜಾಫರ್‌ನಗರ ಜಿಲ್ಲೆಯಲ್ಲಿರುವ ಬುಧಾನ ಎಂಬ ಅವರ ಹಳ್ಳಿಯಲ್ಲಿರುವ ಅವರ ಕುಟುಂಬದ ಮನೆಯಿಂದ ನವಾಜುದ್ದೀನ್ ಅವರ ಮನೆ ಸ್ಫೂರ್ತಿ ಪಡೆದಿದೆ ಎನ್ನಲಾಗಿದೆ.
ಎಲ್ಲಾ ಗುಣಗಳು ಹೋಲಿಕೆಯಾದರೂ…… ಹುಡುಗನನ್ನು ಅಪ್ಪ-ಅಮ್ಮ ರಿಜೆಕ್ಟ್ ಮಾಡಿದ್ರು: ನೆಟ್‌ನಲ್ಲಿ ಧೂಳೆಬ್ಬಿಸಿದ ವಿಡಿಯೋ
ಮನೆಯ ನಿರ್ಮಾಣ ಪೂರ್ಣಗೊಳಿಸಲು ಸುಮಾರು ಮೂರು ವರ್ಷಗಳನ್ನು ತೆಗೆದುಕೊಂಡಿದೆ. ಬಿಳಿಯ ಹೊರಭಾಗಗಳು ಮತ್ತು ಬೃಹತ್ ತಾರಸಿಯೊಂದಿಗೆ ಕಂಗೊಳಿಸುವ ಈ ಮನೆ ನಟಿ ಕಂಗನಾ ಅವರನ್ನು ವಿಸ್ಮಯಗೊಳಿಸಿದೆ.
ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ನವಾಜುದ್ದೀನ್ ಅವರ ಅದ್ದೂರಿ ಮನೆಯ ಚಿತ್ರವನ್ನು ಹಂಚಿಕೊಂಡ ಕಂಗನಾ, “ಸರ್ ಅವರು ತಮ್ಮ ಮನೆಯನ್ನು ಖುದ್ದು ತಾವೇ ವಿನ್ಯಾಸ ಮಾಡಿಕೊಂಡಿದ್ದಾರೆ. ಬಹಳ ಸುಂದರವಾಗಿದೆ…… ಅಭಿನಂದನೆಗಳು,” ಎಂದಿರುವ ’ಕ್ವೀನ್’ ನಟಿಯ ಟಿಪ್ಪಣಿಯನ್ನು ನೋಡೋಣ:
ಪರಸ್ಪರ ಉತ್ತಮ ಬಾಂಧವ್ಯ ಹಂಚಿಕೊಂಡಿರುವ ಕಂಗನಾ ಮತ್ತು ನವಾಜುದ್ದೀನ್ ಪ್ರಸ್ತುತ ಮುಂಬರುವ ಚಿತ್ರ ’ಟಿಕು ವೆಡ್ಸ್ ಶೇರು’ವಿನಲ್ಲಿ ಕೆಲಸ ಮಾಡುತ್ತಿದ್ದಾರೆ. ನಿರ್ಮಾಪಕಿಯಾಗಿ ಇದು ಕಂಗನಾ ಅವರ ಮೊದಲ ಪ್ರಾಜೆಕ್ಟ್ ಆಗಿದೆ. ನಟಿಯ ನಿರ್ಮಾಣ ಸಂಸ್ಥೆಯಾದ ಮಣಿಕರ್ಣಿಕಾ ಫಿಲ್ಮ್ಸ್ ಮೂಲಕ ಚಿತ್ರ ನಿರ್ಮಾಣವಾಗುತ್ತಿದೆ. ಈ ಚಿತ್ರದಲ್ಲಿ ನವಾಜುದ್ದೀನ್ ಸಿದ್ದಿಕಿ ಶೇರು ಮತ್ತು ಅವನೀತ್ ಕೌರ್ ಟಿಕು ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರವು OTT ಪ್ಲಾಟ್‌ಫಾರ್ಮ್‌ನಲ್ಲಿ ಸ್ಟ್ರೀಮಿಂಗ್ ಮಾಡುವ ಮೊದಲು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
ನವಾಜ್ ತಮ್ಮ ಮುಂದೆ ಅನೇಕ ಯೋಜನೆಗಳನ್ನು ಹೊಂದಿದ್ದಾರೆ. ’ಟಿಕು ವೆಡ್ಸ್ ಶಿರು’ ಹೊರತಾಗಿ, ನಟ ಜೋಗಿರ ಸರ ರಾ ರಾ, ಅದ್ಭುತ್, ನೋ ಲ್ಯಾಂಡ್ಸ್ ಮ್ಯಾನ್ ಮತ್ತು ಟೈಗರ್ ಶ್ರಾಫ್‌ರ ಹೀರೋಪಂತಿ 2 ನಂತಹ ಚಿತ್ರಗಳೊಂದಿಗೆ ಈ ವರ್ಷವನ್ನು ಕಳೆಯಲು ಸಿದ್ಧರಾಗಿದ್ದಾರೆ ನವಾಜುದ್ದೀನ್.