ಕಂಗನಾ ರಣಾವತ್ ಒಂದಲ್ಲಾ ಒಂದು ವಿವಾದವನ್ನು ಮೈಮೇಲೆ ಎಳೆದುಕೊಂಡು ಸದಾ ಸುದ್ದಿಯಲ್ಲಿರುವ ಬಾಲಿವುಡ್ ನಟಿಯಾಗಿದ್ದಾರೆ. ಇದೀಗ ಕತಾರ್ ಏರ್ ವೇಸ್ ನ ಸಿಇಒ ಅಕ್ಬರ್ ಅಲ್ ಬೇಕರ್ ಅವರನ್ನು “ಈಡಿಯಟ್’’ ಎಂದು ಜರಿಯುವ ಮೂಲಕ ಮತ್ತೊಂದು ವಿವಾದಕ್ಕೆ ಗುರಿಯಾಗಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ವಾಸುದೇವ್ ಎಂಬುವರು ತಮ್ಮ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ವಿಡಿಯೋವೊಂದರ ಕುರಿತು ಪ್ರತಿಕ್ರಿಯೆ ನೀಡಿರುವ ರಣಾವತ್, ಅಲ್ ಬೇಕ್ ಒಬ್ಬ ಮೂರ್ಖ ಎಂದು ಹೀಗಳೆದಿದ್ದಾರೆ. ಈ ಮೂಲಕ ಸಾಮಾಜಿಕ ಮಾಧ್ಯಮದಲ್ಲಿ ತೀವ್ರ ಟೀಕೆಗೆ ಗುರಿಯಾಗಿದ್ದಾರೆ.
ಭಾರತೀಯ ಜನತಾ ಪಕ್ಷದ ಇಬ್ಬರು ನಾಯಕರು ಪ್ರವಾದಿ ಮೊಹಮ್ಮದ್ ಬಗ್ಗೆ ಅವಹೇಳನಾಕಾರಿ ಹೇಳಿಕೆ ನೀಡಿರುವುದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿತ್ತು. ಈ ವಿಚಾರದಲ್ಲಿ ವಾದ –ವಿವಾದಗಳು ನಡೆಯುತ್ತಿರುವಾಗಲೇ ವಾಸುದೇವ್ ಎಂಬ ವ್ಯಕ್ತಿ ಕತಾರ್ ಏರ್ ವೇಸ್ ಅನ್ನು ಬಹಿಷ್ಕರಿಸುವಂತೆ ಮನವಿ ಮಾಡಿದ್ದರು.
BIG NEWS: ರಾಜ್ಯಸಭಾ ಚುನಾವಣೆ; ಬಿಜೆಪಿ ಅಭ್ಯರ್ಥಿ ನಿರ್ಮಲಾ ಸೀತಾರಾಮನ್ ಗೆಲುವು; ಅಧಿಕೃತ ಘೋಷಣೆಯೊಂದೇ ಬಾಕಿ
ಇದರ ಬೆನ್ನಲ್ಲೇ, ಅಲ್ ಜಜೀರಾ ಟಿವಿಯಲ್ಲಿ ಪ್ರಸಾರವಾದ ಕತಾರ್ ಏರ್ ವೇಸ್ ಮುಖ್ಯಸ್ಥರ ಸಂದರ್ಶನವನ್ನು ಡಬ್ ಮಾಡಿ ಸ್ಟೂಫ್ ಮಾಡಿದ ವಿಡಿಯೋವನ್ನು ಮತ್ತೊಬ್ಬ ಟ್ವಿಟರ್ ಬಳಕೆದಾರ ಪೋಸ್ಟ್ ಮಾಡಿದ್ದರು. ಇದರಲ್ಲಿ ಅಲ್ ಬೇಕರ್, ವಾಸುದೇವ್ ಬಗ್ಗೆ ವ್ಯಂಗ್ಯದಿಂದಲೇ ಬಹಿಷ್ಕಾರದ ಹೇಳಿಕೆಯನ್ನು ಹಿಂಪಡೆಯುವಂತೆ ಮನವಿ ಮಾಡಿದ ವಿಡಿಯೋವಿದೆ.
ಆದರೆ, ಇದು ಡಬ್ ಮಾಡಲಾದ ನಕಲಿ ವಿಡಿಯೋವಾಗಿದ್ದು, ಇದರ ಸತ್ಯಾಸತ್ಯತೆಯನ್ನು ಅರಿಯದ ಕಂಗನಾ ಅವಸರದಲ್ಲಿ ಹೇಳಿಕೆ ನೀಡಿದ್ದಾರೆ. ಇದು ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಟ್ರೋಲ್ ಆಗುತ್ತಿದೆ. ಈ ಬಗ್ಗೆ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಈ ರೀತಿ ಅಭಿಪ್ರಾಯ ವ್ಯಕ್ತಪಡಿಸುವುದು ಸರಿಯಲ್ಲ ಎಂದು ಹೇಳಿದ್ದಾರೆ.
https://twitter.com/Noyanisation_/status/1534432797607092224?ref_src=twsrc%5Etfw%7Ctwcamp%5Etweetembed%7Ctwterm%5E1534432797607092224%7Ctwgr%5E%7Ctwcon%5Es1_&ref_url=https%3A%2F%2Fwww.indiatimes.com%2Fentertainment%2Fcelebs%2Fkangana-ranaut-gets-trolled-for-slamming-qatar-airways-ceo-after-she-takes-spoof-video-for-real-571698.html