ಟೋಕಿಯೊ: ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ ಎಂದು ಕರೆಯಲ್ಪಡುವ ಜಪಾನಿನ ಮಹಿಳೆಯೊಬ್ಬರು ತಮ್ಮ 119 ನೇ ವಯಸ್ಸಿನಲ್ಲಿ ನಿಧನರಾದರು ಎಂದು ಸ್ಥಳೀಯ ಅಧಿಕಾರಿಗಳನ್ನು ಉಲ್ಲೇಖಿಸಿ ಸುದ್ದಿ ಮಾಧ್ಯಮಗಳು ಸೋಮವಾರ ವರದಿ ಮಾಡಿವೆ.
ಕೇನ್ ತನಕಾ ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ. ಇವರು ಜನವರಿ 2, 1903 ರಂದು ಜಪಾನ್‌ನ ನೈಋತ್ಯ ಫುಕುವೋಕಾ ಪ್ರದೇಶದಲ್ಲಿ ಜನಿಸಿದರು. ಅವರು ಜನವರಿ 2019ರ 116 ವರ್ಷಕ್ಕೆ ಅತ್ಯಂತ ಹಿರಿಯ ವ್ಯಕ್ತಿ ಎಂಬ ಹೆಗ್ಗಳಿಕೆ ಪಡೆದುಕೊಂಡಿದ್ದರು. 122 ವರ್ಷಗಳವರೆಗೆ ಬದುಕಿದ್ದ ಜೀನ್ ಕಾಲ್ಮೆಂಟ್ ಅವರ ನಂತರ ಕೇನ್ ತನಕಾ ಎರಡನೇ ಅತಿ ಹಿರಿಯ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದರು.
BIG NEWS: IPS ಅಧಿಕಾರಿ ರವಿ ಡಿ ಚೆನ್ನಣ್ಣವರ್ ಸಹೋದರ ರಾಘವೇಂದ್ರ ಚೆನ್ನಣ್ಣವರ್ ವಿರುದ್ಧ ಪತ್ನಿ ದೂರು; ಅಕ್ರಮ ಸಂಬಂಧದ ಆರೋಪ
ಸ್ಥಳೀಯ ಗವರ್ನರ್ ಸೀಟಾರೊ ಹಟ್ಟೋರಿ ಅವರು, ಏಪ್ರಿಲ್ 19 ರಂದು ನಿಧನರಾದ ನಂತರ ತನಕಾ ಅವರ ಜೀವನವನ್ನು ಶ್ಲಾಘಿಸಿ ಈ ಸುದ್ದಿಯಿಂದ ನಾನು ತುಂಬಾ ದುಃಖಿತನಾಗಿದ್ದೇನೆ ಎಂದು ಸಂತಾಪ ವ್ಯಕ್ತಪಡಿಸಿದ್ದಾರೆ.
ಚಿಕ್ಕವಳಿದ್ದಾಗ, ತನಕಾ ಅವರು ನೂಡಲ್ ಅಂಗಡಿ ಮತ್ತು ಅಕ್ಕಿ ಕೇಕ್ ಅಂಗಡಿ ಸೇರಿದಂತೆ ವಿವಿಧ ವ್ಯವಹಾರಗಳನ್ನು ನಡೆಸುತ್ತಿದ್ದರು. 1922 ರಲ್ಲಿ ಹಿಡಿಯೋ ತನಕಾ ಅವರನ್ನು ವಿವಾಹವಾದ ಅವರು, ನಾಲ್ಕು ಮಕ್ಕಳಿಗೆ ಜನ್ಮ ನೀಡಿದರು ಮತ್ತು ಐದನೆಯ ಮಗುವನ್ನು ದತ್ತು ಪಡೆದಿದ್ದರು. 2021ರಲ್ಲಿ ಟೋಕಿಯೊ ಒಲಿಂಪಿಕ್ಸ್ ಗಾಗಿ ಟಾರ್ಚ್ ರಿಲೇಯಲ್ಲಿ ಭಾಗವಹಿಸಲು ಯೋಜಿಸಿದ್ದರು. 2019ರಲ್ಲಿ ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಅವರನ್ನು ಜೀವಂತವಾಗಿರುವ ಅತ್ಯಂತ ಹಿರಿಯ ವ್ಯಕ್ತಿ ಎಂದು ಗುರುತಿಸಿತ್ತು.