ಬೆಂಗಳೂರು: ಖ್ಯಾತ ನಿರ್ದೇಶಕ ಅರವಿಂದ್ ಕೌಶಿಕ್ ವಿರುದ್ಧ ವಂಚನೆ ಆರೋಪ ಕೇಳಿಬಂದಿದ್ದು, ಪೊಲೀಸರು ನಿರ್ದೇಶಕನನ್ನು ಬಂಧಿಸಿದ್ದಾರೆ.
ನಮ್ ಏರಿಯಾದಲ್ಲಿ ಒಂದಿನ, ಹುಲಿರಾಯ ಸಿನಿಮಾಗಳ ಮೂಲಕ ಖ್ಯಾತಿ ಪಡೆದಿದ್ದ ಅರವಿಂದ್ ಕೌಶಿಕ್, ಕಮಲಿ ಸೀರಿಯಲ್ ನಿರ್ದೇಶನದ ಮೂಲಕ ಮನೆಮಾತಾಗಿದ್ದಾರೆ. ಕಮಲಿ ಧಾರಾವಾಹಿ ನಿರ್ಮಾಪಕ ರೋಹಿತ್ ಎಂಬುವವರು 73 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ದರು.
ಆದರೆ ಧಾರಾವಾಹಿ ತೆರೆಕಂಡ ಬಳಿಕ ಅರವಿಂದ್ ಕೌಶಿಕ್ ನಿರ್ಮಾಪಕರಿಗೆ ಕೊಟ್ಟ ಹಣ ಹಾಗೂ ಲಾಭಾಂಶವನ್ನೂ ನೀಡದೇ ವಂಚಿಸಿದ್ದಾರೆ ಎನ್ನಲಾಗಿದೆ.
BIG NEWS: ಎಲೆಕ್ಟ್ರಿಕ್ ವಾಹನಗಳಿಗೆ ಬೆಂಕಿ ಪ್ರಕರಣ ಹೆಚ್ಚಳ, ಕೇಂದ್ರ ಸರ್ಕಾರದಿಂದ ಮಹತ್ವದ ಕ್ರಮ
ನಿರ್ಮಾಪಕ ರೋಹಿತ್ ನೀಡಿರುವ ದೂರಿನ ಅನ್ವಯ ಅರವಿಂದ್ ಕೌಶಿಕ್ ವಿರುದ್ಧ ಸೆಕ್ಷನ್ 506, 420 ಅಡಿ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.