alex Certify ಕಾರಿನಲ್ಲೇ ನಿದ್ರೆ – ಸ್ನೇಹಿತರ ಮನೆಯಲ್ಲಿ ಸ್ನಾನ: ವಿಚ್ಛೇದನ ಬಳಿಕದ ಕರಾಳ ದಿನಗಳನ್ನು ಬಿಚ್ಚಿಟ್ಟ ಕಮಲಹಾಸನ್ ಮಾಜಿ ಪತ್ನಿ ಸಾರಿಕಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಾರಿನಲ್ಲೇ ನಿದ್ರೆ – ಸ್ನೇಹಿತರ ಮನೆಯಲ್ಲಿ ಸ್ನಾನ: ವಿಚ್ಛೇದನ ಬಳಿಕದ ಕರಾಳ ದಿನಗಳನ್ನು ಬಿಚ್ಚಿಟ್ಟ ಕಮಲಹಾಸನ್ ಮಾಜಿ ಪತ್ನಿ ಸಾರಿಕಾ

ಕಮಲಹಾಸನ್ ಮಾಜಿ ಪತ್ನಿ ಸಾರಿಕಾ ಈ ಹಿಂದೆ ಸಿಮಿ ಗರೆವಾಲ್ ಅವರಿಗೆ ನೀಡಿದ ಸಂದರ್ಶನ ಒಂದರಲ್ಲಿ ವಿಚ್ಛೇದನ ಬಳಿಕ ತಾವು ಅನುಭವಿಸಿದ ಸಂಕಷ್ಟದ ದಿನಗಳನ್ನು ಬಿಚ್ಚಿಟ್ಟಿದ್ದಾರೆ. ಕೇವಲ ಅರವತ್ತು ರೂಪಾಯಿಗಳೊಂದಿಗೆ ಮನೆ ಬಿಟ್ಟ ತಾವು ಆ ದಿನಗಳಲ್ಲಿ ಸ್ನೇಹಿತರ ಮನೆಯಲ್ಲಿ ಸ್ನಾನ ಮಾಡುತ್ತಿದ್ದು, ರಾತ್ರಿ ಕಾರಿನಲ್ಲಿ ನಿದ್ರೆ ಮಾಡುತ್ತಿದ್ದೆ ಎಂದು ಹೇಳಿದ್ದಾರೆ. ಕುತೂಹಲಕರ ಸಂಗತಿ ಎಂದರೆ ಈ ಸಂದರ್ಶನದ ವೇಳೆ ಅವರ ಮಾಜಿ ಪತಿ ಕಮಲ ಹಾಸನ್ ಕೂಡ ಪಕ್ಕದಲ್ಲಿದ್ದರು.

ಸ್ವಾಭಿಮಾನಿಯಾಗಿದ್ದ ತಾನು ಕಮಲಹಾಸನ್ ಅವರಿಂದ ಯಾವುದೇ ಹಣಕಾಸು ನೆರವು ಪಡೆಯಲು ಬಯಸಿರಲಿಲ್ಲ. ತಮ್ಮ ತಾಯಿ ಹಾಗೂ ನಾನು ಆ ಸಂಕಷ್ಟದ ದಿನಗಳಲ್ಲೂ ಒಬ್ಬರಿಗೊಬ್ಬರು ಆಸರೆಯಾಗಿ ನಿಂತಿದ್ದೆವು ಎಂದು ಸಾರಿಕಾ ಹೇಳಿದ್ದು, ಈ ವೇಳೆ ಕಮಲಹಾಸನ್, ಸಾರಿಕಾ ಆರ್ಥಿಕ ಸಂಕಷ್ಟದಲ್ಲಿರುವ ವಿಚಾರ ನನಗೆ ತಡವಾಗಿ ತಿಳಿಯಿತು. ಆದರೆ ಆಕೆ ನನ್ನಿಂದ ಆರ್ಥಿಕ ನೆರವನ್ನು ಬಯಸಲಿಲ್ಲ ಎಂದಿದ್ದಾರೆ.

ಈ ಮೊದಲೇ ವಾಣಿ ಗಣಪತಿ ಅವರನ್ನು ಮದುವೆಯಾಗಿದ್ದ ಕಮಲಹಾಸನ್ 1988ರಲ್ಲಿ ಸಾರಿಕಾ ಜೊತೆ ವೈವಾಹಿಕ ಬದುಕಿಗೆ ಕಾಲಿಟ್ಟಿದ್ದರು. 16 ವರ್ಷಗಳ ದಾಂಪತ್ಯದ ಬಳಿಕ 2004ರಲ್ಲಿ ಇವರುಗಳು ವಿಚ್ಛೇದನ ಪಡೆದಿದ್ದು, ವಿಚ್ಛೇದಿತ ದಂಪತಿಗೆ ಶೃತಿ ಹಾಸನ್ ಹಾಗೂ ಅಕ್ಷರಾ ಹಾಸನ್ ಎಂಬ ಇಬ್ಬರು ಮಕ್ಕಳಿದ್ದಾರೆ. ಮಕ್ಕಳ ಜವಾಬ್ದಾರಿಯನ್ನು ಕಮಲಹಾಸನ್ ಅವರೇ ವಹಿಸಿಕೊಂಡಿದ್ದು, ಸಾರಿಕಾ ಕೂಡ ತಮ್ಮ ಮಕ್ಕಳಿಬ್ಬರ ಜೊತೆ ಅನ್ಯೋನ್ಯವಾಗಿದ್ದಾರೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...