ಚೆನ್ನೈ: ಮಕ್ಕಳ್ ನೀದಿ ಮಯ್ಯುಂ ಪಕ್ಷದ ಮುಖ್ಯಸ್ಥ ಹಾಗೂ ಖ್ಯಾತ ನಟ ಕಮಲ್ ಹಾಸನ್ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ಪ್ರಣಾಳಿಕೆ ಬಿಡುಗಡೆ ಮಾಡಿದ್ದಾರೆ.
ಪ್ರಣಾಳಿಕೆಯನ್ನು ದೂರದೃಷ್ಟಿಯ ದಾಖಲೆ ಎಂದು ಕರೆದ ಕಮಲ್, ಎಂಎಸ್ ಸ್ವಾಮಿನಾಥನ್ ವರದಿ ಅನ್ವಯ ರೈತರ ಬೆಳೆಗೆ ಕನಿಷ್ಠ ಮಾರಾಟದ ಬೆಲೆಯನ್ನು ಜಾರಿಗೆ ತರಲು, ಎಂಎಸ್‌ಎಂಇ ಬೆಂಬಲ ವ್ಯವಸ್ಥೆ ಜಾರಿಯ ಭರವಸೆ ನೀಡಿದ್ದಾರೆ.
ಗೃಹಿಣಿಯರಿಗೆ ತಿಂಗಳಿಗೆ 3 ಸಾವಿರ ರೂಪಾಯಿ ಸಹಾಯಧನ ನೀಡುವುದಾಗಿ ಪ್ರಣಾಳಿಕೆಯಲ್ಲಿ ಭರವಸೆ ನೀಡಲಾಗಿದೆ. ಅದೇ ರೀತಿ ಕೌಶಲ್ಯಾಭಿವೃದ್ಧಿ ಮೂಲಕ ಮಹಿಳೆಯರಿಗೆ ಪ್ರತಿ ತಿಂಗಳು ನಿರ್ದಿಷ್ಠ ಆದಾಯ ಲಭಿಸುವಂತೆ ಮಾಡಲಾಗುವುದು. ಮಹಿಳೆಯರು ಪ್ರತಿ ತಿಂಗಳು 10 -15 ಸಾವಿರ ರೂಪಾಯಿ ಆದಾಯ ಪಡೆಯುವಂತಾಗಲು ಯೋಜನೆ ರೂಪಿಸಲಾಗಿದೆ. ಅವರಿಗೆ ಕೌಶಲ್ಯಾಭಿವೃದ್ಧಿ ತರಬೇತಿ ನೀಡಲಾಗುವುದು. ಮಹಿಳೆಯರ ಸುರಕ್ಷತೆಗೆ ಒತ್ತು ನೀಡಲಾಗುವುದು. ಮಹಿಳೆಯರಿಗೆ 3000 ರೂ. ಸಹಾಯ ಧನ ನೀಡುತ್ತಿರುವುದು ಉಚಿತವಾದ ಕೊಡುಗೆಯಲ್ಲ. ಅವರ ಹಕ್ಕಿನ ನೆರವು ಎಂದು ಕಮಲ್ ಹಾಸನ್ ಹೇಳಿದ್ದಾರೆ.