ಬೆಂಗಳೂರು: ಕಲ್ಯಾಣ ಕರ್ನಾಟಕ ಭಾಗದ ಶಾಸಕರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಲಾ 5 ಕೋಟಿ ರೂ. ಅನುದಾನ ನೀಡಿದ್ದಾರೆ.
ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ(KKRDB)ಗೆ ಪ್ರಸಕ್ತ 2023- 24ನೇ ಸಾಲಿನಲ್ಲಿ ನೀಡಿದ 3000 ಕೋಟಿ ರೂ. ಅನುದಾನದಲ್ಲಿ 90 ಕೋಟಿ ರೂ.ಗಳನ್ನು ಆ ಭಾಗದ ಕಾಂಗ್ರೆಸ್ ಶಾಸಕರಿಗೆ ಹಂಚಲಾಗಿದೆ. 19 ಕಾಂಗ್ರೆಸ್ ಶಾಸಕರು ಮತ್ತು ಪಕ್ಷೇತರ ಶಾಸರಾದ ಕಾಂಗ್ರೆಸ್ ನೊಂದಿಗೆ ಗುರುತಿಸಿಕೊಂಡಿರುವ ಲತಾ ಮಲ್ಲಿಕಾರ್ಜುನ ಅವರಿಗೆ ತಲಾ 5 ಕೋಟಿ ರೂ. ಅನುದಾನ ಒದಗಿಸಲಾಗಿದೆ.
20 ಶಾಸಕರಿಗೆ 5 ಕೋಟಿಯಂತೆ 100 ಕೋಟಿ ರೂ. ನೀಡಲು ಸಿಎಂ ಮುಂದಾಗಿದ್ದಾರೆ. ಕೆಕೆಆರ್‌ಡಿಬಿಗೆ ನೀಡಿದ ಅನುದಾನದಲ್ಲಿ ಶೇಕಡ 3ರಷ್ಟನ್ನು ಸಿಎಂ ವಿವೇಚನಾ ನಿಧಿ ಹೆಸರಲ್ಲಿ ಪಡೆದುಕೊಳ್ಳಲು ಅವಕಾಶ ಇದೆ. ಈ ನಿಟ್ಟಿನಲ್ಲಿ ಶಾಸಕರಾದ ಖನಿಜ ಫಾತಿಮಾ, ಅಲ್ಲಮ ಪ್ರಭು ಪಾಟೀಲ, ಬಿ.ಆರ್. ಪಾಟೀಲ್, ಅಜಯ್ ಸಿಂಗ್, ಚನ್ನಾರೆಡ್ಡಿ ಪಾಟೀಲ್, ರಾಜ ವೆಂಕಟಪ್ಪ ನಾಯಕ, ಬಸವರಾಜ ರಾಯರೆಡ್ಡಿ, ರಾಘವೇಂದ್ರ ಹಿಟ್ನಾಳ್, ಬಸನಗೌಡ ದದ್ದಲ್, ಜಿ. ಹಂಪಯ್ಯನಾಯಕ, ಹಂಪನಗೌಡ ಬಾದರ್ಲಿ, ಬಸನಗೌಡ ತುರುವಿಹಾಳ, ಇ. ತುಕಾರಾಂ, ನಾರಾ ಭರತರೆಡ್ಡಿ, ಜೆ.ಎನ್. ಗಣೇಶ್, ಬಿ.ಎಂ. ನಾಗರಾಜ, ಶ್ರೀನಿವಾಸ ಎನ್.ಟಿ., ಹೆಚ್.ಆರ್. ಗವಿಯಪ್ಪ, ಲತಾ ಮಲ್ಲಿಕಾರ್ಜುನ ಅವರಿಗೆ ತಲಾ 5 ಕೋಟಿ ರೂ. ಅನುದಾನ ನೀಡಲಾಗಿದೆ.