
ಹೈದರಾಬಾದ್: ಗಾಯಕ ಟಿ.ಎಸ್.ರಾಘವೇಂದ್ರ ಅವರ ಮಗಳು ಖ್ಯಾತ ಗಾಯಕಿ ಕಲ್ಪನಾ ರಾಘವೇಂದ್ರ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.
ಕಲ್ಪನಾ ರಾಘವೇಂದ್ರ ಕಳೆದ ಎರಡು ದಿನಗಳಿಂದ ಮನೆಯ ಬಾಗಿಲು ತೆರೆದಿರಲಿಲ್ಲ. ಭದ್ರತಾ ಸಿಬ್ಬಂದಿ ಅನುಮಾನಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲಿಸಿದಾಗ ಮನೆಯ ಒಳಗೆ ಕಲ್ಪನಾ, ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು.
ಅವರು ಆತ್ಮಹತ್ಯೆಗೆ ಯತ್ನಿಸಿದ್ದರು ಎಂದು ತಿಳಿದುಬಂದಿದೆ. 2010ರಲ್ಲಿ ಕಲ್ಪನಾ ಮಲಯಾಳಂ ಸ್ಟಾರ್ ಸಿಂಗರ್ ರಿಯಾಲಿಟಿ ಶೋ ಗೆದ್ದಿದ್ದರು.
ಕಲ್ಪನಾ ರಾಘವೇಂದ್ರ ತೆಲಗು, ತಮಿಳು, ಕನ್ನಡದಲ್ಲಿ ಹಾಡುಗಳನ್ನು ಹಾಡಿದ್ದಾರೆ. ಕನ್ನಡದ ಗಲಾಟೆ ಸಿನಿಮಾದ ಮುದ್ದಾದ ನಗೆಯೇ ಎಂಬ ಹಾಡು ಜನಪ್ರಿಯತೆ ಪಡೆದಿದೆ. ಕಲ್ಪನಾ ರಾಘವೇಂದ್ರ 1500ಕ್ಕೂ ಹೆಚ್ಚು ಹಾಡುಗಳನ್ನು ಹಾಡಿ ಜನಪ್ರಿಯತೆ ಪಡೆದಿದ್ದಾರೆ.