alex Certify ಇದು ಆತ್ಮಹತ್ಯೆ ಯತ್ನವಲ್ಲ: ಔಷಧಿ ಓವರ್ ಡೋಸ್ ಎಂದ ಗಾಯಕಿ ಕಲ್ಪನಾ ರಾಘವೇಂದ್ರ ಮಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇದು ಆತ್ಮಹತ್ಯೆ ಯತ್ನವಲ್ಲ: ಔಷಧಿ ಓವರ್ ಡೋಸ್ ಎಂದ ಗಾಯಕಿ ಕಲ್ಪನಾ ರಾಘವೇಂದ್ರ ಮಗಳು

ಹೈದರಾಬಾದ್: ಖ್ಯಾತ ಗಾಯಕಿ ಕಲ್ಪನಾ ರಾಘವೇಂದ್ರ ಆತ್ಮಹತ್ಯೆಗೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಮಗಳು ಸ್ಪಷ್ಟನೆ ನೀಡಿದ್ದು, ಇದು ಆತ್ಮಹತ್ಯೆ ಯತ್ನವಲ್ಲ ಡ್ರಗ್ ಓವರ್ ಡೋಸ್ ನಿಂದ ಆಗಿದ್ದು ಎಂದಿದ್ದಾರೆ.

ಹೈದರಾಬಾದ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗಾಯಕಿ ಕಲ್ಪನಾ ಮಗಳು, ಅಮ್ಮ ಆತ್ಮಹತ್ಯೆಗೆ ಪ್ರಯತ್ನಿಸಿಲ್ಲ. ಇದು ಸುಳ್ಳು. ಅವರಿಗೆ ಯಾವುದೇ ಸಮಸ್ಯೆಯಿಲ್ಲ. ಅವರು ಎಲ್ ಎಲ್ ಬಿ ಹಾಗೂ ಪಿಹೆಚ್ ಡಿ ಮಾಡುತ್ತಿದ್ದಾರೆ. ಅವರಿಗೆ ನಿದ್ರಾಹೀನತೆ ಇದೆ. ನಿದ್ರೆಮಾತ್ರೆ ತೆಗೆದುಕೊಂಡಿದ್ದರು ಅದು ಓವರ್ ಡೋಸ್ ಆಗಿದೆ ಅಷ್ಟೇ ಎಂದು ಸ್ಪಷ್ಟಪಡಿಸಿದ್ದಾರೆ.

ನಮಗೆ ಅವರ ಬಗ್ಗೆ ಖುಷಿಯಿದೆ. ಅವರು ಯಾವುದೇ ಆತ್ಮಹತ್ಯೆಗೆ ಪ್ರಯತ್ನಿಸಿಲ್ಲ. ಔಷಧಿ ಓವರ್ ಡೋಸ್ ಆಗಿ ಹೀಗಾಗಿದೆ. ಈ ಘಟನೆಯನ್ನು ತಿರುಚಬೇಡಿ ಎಂದು ಹೇಳುವ ಮೂಲಕ ವದಂತಿಗಳಿಗೆ ತೆರೆ ಎಳೆದಿದ್ದಾರೆ.

ಖ್ಯಾತ ಗಾಯಕಿ ಕಲ್ಪನಾ ರಾಘವೇಂದ್ರ ಹೈದರಾಬಾದ್ ನಲ್ಲಿ ತಮ್ಮ ನಿವಾಸದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಕಂಡುಬಂದಿದ್ದರು. ಎರಡು ದಿನಗಳಿಂದ ಮನೆ ಬಾಗಿಲು ತೆರೆದಿರಲಿಲ್ಲ. ಅನುಮಾನಗೊಂಡು ಭದ್ರತಾ ಸಿಬ್ಬಂದಿ ಪರಿಶೀಲಿಸಿದಾಗ ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿ ಇದ್ದರು. ಕಲ್ಪನಾ ರಾಘವೇಂದ್ರ ಆತ್ಮಹತ್ಯೆಗೆ ಯತ್ನಿಸಿದ್ದರು ಎನ್ನಲಾಗಿತ್ತು. ಆದರೆ ಅವರ ಮಗಳು ಅವರು ಆತ್ಮಹತ್ಯೆಗೆ ಯತ್ನಿಸಿಲ್ಲ, ಔಷಧ ಒವರ್ ಡೋಸ್ ನಿಂದ ಹಾಗಾಗಿಗೆ ಎಂದಿದ್ದಾರೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...