ಆಂಟಿಯೊಬ್ಬರು ಮನೆ ಅಂಗಳದಲ್ಲಿ ರಂಗೋಲಿ ಹಾಕುವ ಸಂದರ್ಭದಲ್ಲಿ ಕಾಳಿಂಗ ಸರ್ಪವೊಂದು ಎಂಟ್ರಿಯಾಗಿದೆ.
ನೋಡುತ್ತಿದ್ದಂತೆ ಹಾವು ಆಂಟಿ ಮನೆಯ ಗೇಟಿನ ಬಳಿ ಬಂದಿದೆ. ಆದರೆ ಆಂಟಿ ಬಡಿಗೆ ಇಟ್ಟುಕೊಂಡು ಹಾವನ್ನು ಅಟ್ಟಿಸಿದ್ದಾರೆ. ಹಾವಿಗೆ ಅಂಜದೇ ಬಡಿಗೆ ಹಿಡಿದುಕೊಂಡು ಹಾವನ್ನು ವಾಪಸ್ ಓಡಿಸಿದ್ದಾರೆ.
ಮತ್ತೋರ್ವ ಮಹಿಳೆಯೊಬ್ಬರು..ಆಂಟೀ ಹುಷಾರು..ಕಾಳಿಂಗ ಹಾವು ಬಹಳ ಡೇಂಜರು..ನಿಮ್ಮ ಮನೆಯವರಿಗೆ ಫೋನ್ ಮಾಡಿ ವಿಷಯ ತಿಳಿಸಿ ಎಂದು ಕೂಗಿಕೊಂಡಿದ್ದಾರೆ.ಆದರೆ ಈ ಮಹಿಳೆ ಕೊಂಚ ಕೂಡ ಅಂಜದೇ ಒಬ್ಬಂಟಿಯಾಗಿ ಹಾವನ್ನು ಎದುರಿಸಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಬಹಳ ವೈರಲ್ ಆಗಿದೆ. ನಾಗರಹಾವನ್ನು ಕೊಲ್ಲುವುದು ಕಾನೂನುಬಾಹಿರ ಮತ್ತು ಶಿಕ್ಷಾರ್ಹ ಅಪರಾಧವಾಗಿದೆ.
Kalesh b/w Aunties and a Cobra
pic.twitter.com/N7i7iytrto— Ghar Ke Kalesh (@gharkekalesh) December 11, 2024