ಕಲಬುರ್ಗಿ: ಬಾತ್ ರೂಮ್ ಗೆ ಹೋಗಿದ್ದ ಮಹಿಳೆಯ ದೃಶ್ಯವನ್ನು ಸೆಕ್ಯೂರಿಟಿ ಗಾರ್ಡ್ ಒಬ್ಬ ಸೆರೆಹಿಡೆಯುತ್ತಿದ್ದ ಘಟನೆ ಕಲಬುರ್ಗಿ ನಗರದ ರಾಮಮಂದಿರ ಸರ್ಕಲ್ ಬಳಿಯ ಅಪಾರ್ಟ್ ಮೆಂಟ್ ನಲ್ಲಿ ನಡೆದಿದೆ.
ಅಪಾರ್ಟ್ ಮೆಂಟ್ ನಲ್ಲಿ ಬಾಡಿಗೆಗೆ ವಾಸವಾಗಿದ್ದ ಮಹಿಳೆಯೊಬ್ಬರು ಬಾತ್ ರೂಮ್ ಗೆ ಹೋಗಿದ್ದಾಗ ಮಹಿಳೆಯ ವಿಡಿಯೋವನ್ನು ಸೆಕ್ಯೂರಿಟಿ ಗಾರ್ಡ್ ರೆಕಾರ್ಡ್ ಮಾಡುತ್ತಿದ್ದ. ಇದನ್ನು ಗಮನಿಸಿದ ಮಹಿಳೆ ತನ್ನ ಪತಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾಳೆ. ತಕ್ಷಣ ಅಪಾರ್ಟ್ ಮೆಂಟ್ ಗೆ ಆಗಮಿಸಿದ ಪತಿ, ಸೆಕ್ಯೂರಿಟಿ ಗಾರ್ಡ್ ವಿಶ್ವನಾಥ್ ಎಂಬಾತನನ್ನು ಹಿಡಿದು ಪ್ರಶ್ನಿಸಿದ್ದಾರೆ.
ಅಲ್ಲದೇ ಅಪಾರ್ಟ್ ಮೆಂಟ್ ನ ಬೇಸ್ ಮೆಂಟ್ ನಲ್ಲಿದ್ದ ಕಂಬಕ್ಕೆ ಕಟ್ಟಿಹಾಕಿ ಅಪಾರ್ಟ್ ಮೆಂಟ್ ನಿವಾಸಿಗಳು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಬಳಿಕ ಪೊಲೀಸರುಗೆ ಮಾಹಿತಿ ನೀಡಿದ್ದಾರೆ. ಸ್ಟೇಷನ್ ಬಜಾರ್ ಪೊಲೀಸರು ಆರೋಪಿ ಸೆಕ್ಯೂರಿಟಿ ಗಾರ್ಡ್ ನನ್ನು ಬಂಧಿಸಿದ್ದಾರೆ.