ಕಲಬುರ್ಗಿ: ಕಲಬುರ್ಗಿಯ ಸಪ್ತಗಿರಿ ಹೋಟೆಲ್ ನಲ್ಲಿ ಸಿಲಿಂಡರ್ ಸ್ಫೋಟಗೊಂಡು 10 ಜನರು ಗಾಯಗೊಂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಚಿಕಿತ್ಸೆಗಾಗಿ ಕೆಲ ಗಾಯಾಳುಗಳನ್ನು ಬೆಂಗಳೂರಿನ ಆಸ್ಪತ್ರೆಗೆ ಹಾಗೂ ಕೆಲ ಗಾಯಾಳುಗಳನ್ನು ಮಹಾರಾಷ್ಟ್ರದ ಮೀರಜ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.
ಸಪ್ತಗಿರಿ ಹೋಟೆಲ್ ನಲ್ಲಿ ಸಿಲಿಂಡರ್ ಸ್ಫೋಟದಲ್ಲಿ 10 ಜನರು ಗಾಯಗೊಂಡಿದ್ದು, ಅವರಲ್ಲಿ 7 ಜನರ ಸ್ಥಿತಿ ಗಂಭೀರವಾಗಿದೆ. 7 ಗಾಯಾಳುಗಳ ಪೈಕಿ ಇಬ್ಬರನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಹಾಗೂ 5 ಗಾಯಾಳುಗಳನ್ನು ಮಹಾರಾಷ್ಟ್ರದ ಮೀರಜ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.
ಉಳಿದ ಗಾಯಾಳುಗಳನ್ನು ಕಲಬುರ್ಗಿಯ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇಂದು ಮುಂಜಾನೆ 6 ಗಂಟೆ ವೇಳೆ ಹೋಟೆಲ್ ಸಿಬ್ಬಂದಿ ಉಪಹಾರ ಸಿದ್ಧಪಡಿಸುತ್ತುದ್ದ ವೇಳೆ ಸಿಲಿಂಡರ್ ಸೋರಿಕೆಯಾಗುತ್ತಿರುವುದು ಗೊತ್ತಾಗಿದೆ. ತಕ್ಷಣ ಹೋಟೆಲ್ ಸಿಬ್ಬಂದಿಗಳು ಹೋಟೆಲ್ ನಿಂದ ಹೊರಗೋಡಿಬಂದಿದ್ದಾರೆ. ಕೆಲ ಸಮಯ ಬಿಟ್ಟು ಸಿಬ್ಬಂದಿಗಳು ಮತ್ತೆ ಹೋಟೆಲ್ ಕಿಚನ್ ಗೆ ಹೋಗಿ ನೋಡಿದ್ದಾರೆ. ಈ ವೆಲೆ ಏಕಾಏಕಿ ಸಿಲಿಂಡರ್ ಸ್ಫೋಟಗೊಂಡು ಹತ್ತು ಜನರು ಗಾಯಗೊಂಡಿದ್ದಾರೆ.