ಕಲಬುರ್ಗಿ: ಸಿಮೆಂಟ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕನೊಬ್ಬ ಹೈಡ್ರಾ ಬಡಿದು ಮೃತಪಟ್ಟಿರುವ ಘಟನೆ ಕಲಬುರ್ಗಿ ಜಿಲ್ಲೆಯ ಸೇಡಂ ತಾಲೂಕಿನ ಕೊಡ್ಲಾ ಗ್ರಾಮದ ಬಳಿ ನಡೆದಿದೆ.
ರವಿ ಪುರು ರಾಠೋಡ್ (45) ಮೃತ ದುರ್ದೈವಿ. ಮೃತ ರವಿ ಸಿಮೆಂಟ್ ಕಂಪನಿಯಲ್ಲಿ ಹೈಡ್ರಾ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಹೈಡ್ರಾ ಬಡಿದು ಗಂಭೀರವಾಗಿ ಗಾಯಗೊಂಡಿದ್ದ ರವಿ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾನೆ.
ಕಾರ್ಮಿಕ ಸಾವನ್ನಪ್ಪುತ್ತಿದ್ದಂತೆ ಇತರ ಕಾರ್ಮಿಕರು ಸಿಮೆಂಟ್ ಕಾರ್ಖಾನೆ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಕಾರ್ಮಿಕರಿಗೆ ಕಂಪನಿಯಲ್ಲಿ ಯಾವುದೇ ಸುರಕ್ಷತೆ ಅಳವಡಿಸಿಲ್ಲ. ಜೀವಕ್ಕೆ ಅಪಾಯವಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸೇಡಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.