
ಕಲಬುರ್ಗಿ: ದಿನದಿಂದ ದಿನಕ್ಕೆ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆ. ಪೊಲೀಸ್ ಠಾಣೆಗೆ ದೂರು ನೀಡಲು ಹೋದ ಮಹಿಳೆಗೆ ಪೊಲೀಸ್ ಸಿಬ್ಬಂದಿ ಲೈಂಗಿಕ ಕಿರುಕುಳ ನೀಡಿರುವ ಘಟನೆ ನಡೆದಿದೆ.
ಕಲಬುರ್ಗಿ ಜಿಲ್ಲೆಯ ಕಮಲಾಪುರ ಠಾಣೆಯ ಕಾನ್ಸ್ ಟೇಬಲ್ ಬಸವರಾಜ್ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ಮಹಿಳೆ ಗಂಡನ ಹಿಂಸೆ, ಕುಡಿತದ ಚಟ, ಜಗಳದಿಂದ ಬೇಸತ್ತು ಪತಿ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಬಂದಿದ್ದರು. ಈ ವೇಳೆ ಮಹಿಳೆಯ ಅಸಹಾಯಕತೆಯನ್ನು ಕಂಡ ಕಾನ್ಸ್ ಟೇಬಲ್ ಬಸವರಾಜ್, ನಯವಾಗಿ ಆಕೆಯ ಸಮಸ್ಯೆಯನ್ನು ಆಲಿಸಿ ಸಹಾನುಭೂತಿ ತೋರುವವನಂತೆ ಪರುಚಯಿಸಿಕೊಂಡಿದ್ದಾನೆ.
ಮಹಿಳೆಯ ಮೊಬೈಲ್ ನಂಬರ್ ನ್ನು ಪಡೆದುಕೊಂಡಿದ್ದಾನೆ. ಬಳಿಕ ಪ್ರತಿದಿನ ಆಕೆಗೆ ವಾಟ್ಸಪ್ ಮೆಸೆಜ್ ಮಾಡುವುದು, ತನ್ನ ಜೊತೆ ಮಲಗು ಸಮಸ್ಯೆ ಪರಿಹರಿಸುತ್ತೇನೆ ಎಂದು ಪದೇ ಪದೇ ಸಂದೇಶ ರವಾನಿಸಿದ್ದಾನೆ ಎಂದು ಮಹಿಳೆ ದೂರಿದ್ದಾರೆ. ಕಾನ್ಸ್ ಟೇಬಲ್ ಕಿರುಕುಳದಿಂದ ನೊಂದ ಮಹಿಳೆ ಬಸವರಾಜ್ ವಿರುದ್ಧ ದೂರು ನೀಡಿದ್ದಾರೆ.
ಕಾನ್ಸ್ ಟೇಬಲ್ ಬಸವರಾಜ್ ವಿರುದ್ಧ ಕಮಲಾಪುರ ಠಾಣೆಯಲ್ಲಿ ಐಪಿಸಿ ಸೆಕ್ಷನ್ 345a ಹಾಗೂ 506 ಅಡಿ ಕೇಸ್ ದಾಖಲಾಗಿದೆ.