alex Certify ಲವ್, ಸೆಕ್ಸ್, ದೋಖಾ: ಸಂಬಂಧ ಬೆಳೆಸಿ ಕೈಕೊಟ್ಟ ಯುವಕನ ವಿರುದ್ಧ ಠಾಣೆ ಎದುರಲ್ಲೇ ಆಕ್ರೋಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲವ್, ಸೆಕ್ಸ್, ದೋಖಾ: ಸಂಬಂಧ ಬೆಳೆಸಿ ಕೈಕೊಟ್ಟ ಯುವಕನ ವಿರುದ್ಧ ಠಾಣೆ ಎದುರಲ್ಲೇ ಆಕ್ರೋಶ

ಕಲಬುರ್ಗಿ: ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿದ ಪ್ರಿಯಕರನಿಗೆ ಪೊಲೀಸ್ ಠಾಣೆ ಎದುರಲ್ಲೇ ಯುವತಿ ಥಳಿಸಿದ್ದಾಳೆ.

ಠಾಣೆ ಎದುರಲ್ಲೇ ಕಪಾಳಮೋಕ್ಷ ಮಾಡಿದ ಯುವತಿ ಆಕ್ರೋಶ ವ್ಯಕ್ತಪಡಿಸಿದ್ದು, ಯುವತಿಯ ಆಕ್ರೋಶಕ್ಕೆ ಪ್ರಿಯಕರ ಕಂಗಾಲಾಗಿ ಹೋಗಿದ್ದಾನೆ.

ಬೆಂಗಳೂರು ನಿವಾಸಿಯಾಗಿರುವ ಯುವತಿ, ಕಲ್ಬುರ್ಗಿ ತಾಲೂಕಿನ ಇರ್ಫಾನ್ ಆರು ವರ್ಷಗಳಿಂದ ಪರಿಚಯದವರಾಗಿದ್ದು, ಕೆಲವರ್ಷಗಳಿಂದ ಪ್ರೀತಿಸಿದ್ದಾರೆ. ಯುವತಿ ಬೆಂಗಳೂರಿನ ಶೋರೂಮ್ ವೊಂದರಲ್ಲಿ ಕೆಲಸ ಮಾಡಿಕೊಂಡಿದ್ದಾಳೆ. ಇರ್ಪಾನ್ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದು, ಇಬ್ಬರ ನಡುವೆ ಗೆಳೆತನ ಬೆಳೆದಿದ್ದು, ನಂತರ ಪ್ರೀತಿಸಿದ್ದಾರೆ. ಮದುವೆಯಾಗುವುದಾಗಿ ನಂಬಿಸಿದ್ದ ಇರ್ಫಾನ್ ದೈಹಿಕ ಸಂಬಂಧ ಬೆಳೆಸಿದ್ದಾನೆ. ಇದರಿಂದ ಆಕೆ ಗರ್ಭಿಣಿಯಾಗಿದ್ದು, ಮದುವೆಗೆ ಮೊದಲೇ ಮಗುವಾದರೆ ತೊಂದರೆಯಾಗುತ್ತದೆಂದು ಗರ್ಭಪಾತ ಮಾಡಿಸಿದ್ದಾನೆ ಎನ್ನಲಾಗಿದೆ.

ಕಲ್ಬುರ್ಗಿಯ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಮದುವೆ ಆಗುವುದಾಗಿ ಹೇಳಿದ್ದ ಇರ್ಫಾನ್ ಯುವತಿಯನ್ನು ಬೆಂಗಳೂರಿನಲ್ಲಿಯೇ ಬಿಟ್ಟು ಊರಿಗೆ ಮರಳಿದ್ದಾನೆ. ಇದರಿಂದ ಆಕ್ರೋಶಗೊಂಡ ಯುವತಿ ಕಲಬುರ್ಗಿಗೆ ಗ್ರಾಮಾಂತರ ಠಾಣೆ ಪೊಲೀಸರಿಗೆ ನ್ಯಾಯಕೊಡಿಸುವಂತೆ ಮನವಿ ಮಾಡಿದ್ದಾರೆ. ಪೊಲೀಸರು ಇರ್ಪಾನ್ ನನ್ನು ಠಾಣೆಗೆ ಕರೆಸಿದ್ದು, ಆತನನ್ನು ಕಂಡ ಯುವತಿ ಮೋಸ ಮಾಡಿದ್ದೀಯಾ ಎಂದು ಆಕ್ರೋಶದಿಂದ ಥಳಿಸಿದ್ದಾಳೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...