ಕಲಬುರಗಿ: ರಾಜ್ಯದಲ್ಲಿ ಸಾಲು ಸಾಲು ಕೊಲೆ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಬೆಂಗಳೂರಿನಲ್ಲಿ ಮಹಿಳೆಯ ಬರ್ಬರ ಹತ್ಯೆ, ಕಾರವಾರದಲ್ಲಿ ಉದ್ಯಮಿ ಕೊಲೆ ಪ್ರಕರಣಗಳ ಬೆನ್ನಲ್ಲೇ ಕಲಬುರಗಿಯಲ್ಲಿ ಪದವಿ ವಿದ್ಯಾರ್ಥಿಯನ್ನು ಚಾಕುವಿನಿಂದ ಇರಿದು ಕೊಂದಿರುವ ಘಟನೆ ನಡೆದಿದೆ.
ಸುಮೀತ್ (19) ಕೊಲೆಯಾಗಿರುವ ವಿದ್ಯಾರ್ಥಿ. ಸುಮೀತ್ ಮಹಾರಾಷ್ಟ್ರದ ಮುಂಬೈನಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದ. ನಾಲ್ಕೈದು ದಿನಗಳ ಹಿಂದಷ್ಟೇ ತಾಯಿ ಜೊತೆ ಊರಿಗೆ ಬಂದಿದ್ದ. ಸುಮೀತ್ ಸಹೋದರ ಸಚಿನ್ ಯುವತಿಯೊಬ್ಬಳ ಜೊತೆ ಸ್ನೇಹ ಹೊಂದಿದ್ದ. ಸಚಿನ್ ಮೇಲಿನ ಕೋಪಕ್ಕೆ ಸುಮೀತ್ ಜೊತೆ ಯುವತಿ ಕಡೆಯವರು ಗಲಾಟೆ ಮಾಡಿದ್ದರು.
ಅಲ್ಲದೇ ಸುಮೀತ್ ತಾಯಿ ಜೊತೆಯೂ ಗಲಾಟೆ ಮಾಡಿದ್ದರು. ಗಲಾಟೆ ವಿಕೋಪಕ್ಕೆ ತಿರುಗಿದ್ದು, ಸುಮೀತ್ ಗೆ ಚಾಕುವಿನಿಂದ ಇರಿದು ಕೊಂದಿದ್ದಾರೆ. ಕಲಬುಅರಗಿ ವಿಶ್ವವಿದ್ಯಾಲಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.