
ಕಲಬುರಗಿ: ಕಲಬುರಗಿಯಲ್ಲಿ ಬೆಳ್ಳಂಬೆಳಗ್ಗೆ ಕಬ್ಬಿಣದ ರಾಡ್ ನಿಂದ ಹೊಡೆದು ರೌಡಿಶೀಟರ್ ಕೊಲೆ ಮಾಡಲಾಗಿದೆ.
ವೀರೇಶ್ ಸಾರಥಿ(40) ಕೊಲೆಯಾದ ರೌಡಿಶೀಟರ್ ಎಂದು ಹೇಳಲಾಗಿದೆ.
ಕಾಕಡೆ ಚೌಕದ ಲಂಗರ್ ಹನುಮಾನ್ ದೇವಸ್ಥಾನದ ಬಳಿ ಘಟನೆ ನಡೆದಿದೆ. ಕೊಲೆಯಾದ ರೌಡಿಶೀಟರ್ ಕಲಬುರಗಿ ಭವಾನಿ ನಗರದ ನಿವಾಸಿಯಾಗಿದ್ದಾನೆ. ದೇಗುಲದ ಸಮೀಪ ಕರೆಸಿಕೊಂಡ ದುಷ್ಕರ್ಮಿಗಳು ವೀರೇಶ್ ನನ್ನು ಕೊಲೆ ಮಾಡಿದ್ದಾರೆ. ಘಟನಾ ಸ್ಥಳಕ್ಕೆ ಉಪನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.