
ಕಲಬುರಗಿ: ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆ ಕಲಬುರ್ಗಿ ನಗರದ ವಾಜಪೇಯಿ ಬಡಾವಣೆ ಬಳಿ ನಡೆದಿದೆ.
ಕರುಣೇಶ್ವರ ನಗರದ ನಿವಾಸಿ ನಿಖಿಲ್(22) ಮೃತಪಟ್ಟ ಯುವಕ ಎಂದು ಗುರುತಿಸಲಾಗಿದೆ. ನಿಖಿಲ್ ಸಹೋದರ ಮತ್ತು ತಾಯಿಯ ಮೇಲೆ ಹಲ್ಲೆಯೂ ಹಲ್ಲೆ ಮಾಡಲಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ನಿಖಿಲ್ ಸಂಬಂಧಿಯಾಗಿರುವ ಯುವತಿಯ ನಿಶ್ಚಿತಾರ್ಥ ಫಿಕ್ಸ್ ಆಗಿತ್ತು. ಆದರೆ, ಯುವತಿಯನ್ನು ಪ್ರೀತಿಸುತ್ತಿದ್ದ ಯುವಕ ನಿಶ್ಚಿತಾರ್ಥ ಫಿಕ್ಸಾಗಿದ್ದ ಯುವಕನಿಗೆ ಕರೆ ಮಾಡಿದ್ದಾನೆ. ಇದನ್ನು ಪ್ರಶ್ನಿಸಲು ಯುವಕನ ಮನೆಗೆ ನಿಖಿಲ್ ತೆರಳಿದ್ದು, ಮಾತುಕತೆಯ ವೇಳೆ ಗಲಾಟೆಯಾಗಿ ಮಾರಕಾಸ್ತ್ರದಿಂದ ಹೊಡೆದು ಬರ್ಬರವಾಗಿ ಹತ್ಯೆ ಮಾಡಲಾಗಿದೆ ಎಂದು ಹೇಳಲಾಗಿದೆ. ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮಕೈಗೊಂಡಿದ್ದಾರೆ.