ಕಲಬುರಗಿ : ಕಲಬುರಗಿಯಲ್ಲಿ ಸಂಸದ ಉಮೇಶ್ ಜಾಧವ್ ಬೆಂಬಲಿಗ, ಬಿಜೆಪಿ ಮುಖಂಡನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ.
ಕಲುಬುರಗಿ ಜಿಲ್ಲೆಯ ಅಫಜಲಪುರದ ಸಾಗನೂರು ಗ್ರಾಮದ ಜಮೀನಿನಲ್ಲಿ ಸಂಸದ ಉಮೇಶ್ ಜಾಧವ್ ಬೆಂಬಲಿಗ ಹಾಗೂ ಬಿಜೆಪಿ ಮುಖಂಡ ಗಿರೀಶ್ ಚಕ್ರ ಎಂಬಾತನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ.
ಬಿಎಸ್ ಎನ್ ಎಲ್ ನಿರ್ದೇಶರಾಗಿದ್ದ ಗಿರೀಶ್ ಚಕ್ರನಿಗೆ ಪಾರ್ಟಿ ಕೊಡುವುದಾಗಿ ಕರೆಸಿ ಅಫಜಲಪುರದ ಸಾಗನೂರು ಗ್ರಾಮದ ಜಮೀನಿನಲ್ಲಿ ಹತ್ಯೆ ಮಾಡಲಾಗಿದೆ. ಘಟನೆ ಸಂಬಂಧ ಗಾಣಾಗಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.