ಕಲಬುರಗಿ: ಆಸ್ಪತ್ರೆಯ ಕಿಟಕಿಯಿಂದ ಜಿಗಿದು ವಿಚಾರಣಾಧೀನ ಕೈದಿ ಪರಾರಿಯಾದ ಘಟನೆ ಕಲಬುರ್ಗಿಯ ಜಿಮ್ಸ್ ಆಸ್ಪತ್ರೆ ಜೈಲು ವಾರ್ಡ್ ನಲ್ಲಿ ನಡೆದಿದೆ.
ಸಿದ್ದಪ್ಪ ಅಲ್ಲೂರ್(22) ಆಸ್ಪತ್ರೆಯಿಂದ ಪರಾರಿಯಾದ ಕೈದಿ ಎಂದು ಹೇಳಲಾಗಿದೆ. ಚಿತ್ತಾಪುರ ತಾಲ್ಲೂಕಿನ ಅಲ್ಲೂರು ಬಿ ಗ್ರಾಮದ ನಿವಾಸಿಯಾಗಿರುವ ಸಿದ್ದಪ್ಪ ಎರಡು ತಿಂಗಳ ಹಿಂದೆ ಸ್ನೇಹಿತನ ಕೊಲೆ ಪ್ರಕರಣದಲ್ಲಿ ಜೈಲು ಸೇರಿಕೊಂಡಿದ್ದ. ಅಸಹಜ ವರ್ತನೆ ತೋರಿದ ಹಿನ್ನಲೆಯಲ್ಲಿ 4 ದಿನಗಳ ಹಿಂದೆ ಆತನನ್ನು ಜಿಮ್ಸ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ಇವತ್ತು ಬೆಳಗಿನ ಜಾವ 4 ಗಂಟೆ ಸುಮಾರಿಗೆ ಜೈಲಿನ ಕಿಟಕಿಯಿಂದ ಜಿಗಿದು ಸಿದ್ಧಪ್ಪ ಪರಾರಿಯಾಗಿದ್ದಾನೆ. ಬ್ರಹ್ಮಪುರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ ಎನ್ನಲಾಗಿದೆ.