
ಕಲಬುರಗಿ: ಸರ್ಕಾರದ ವಸತಿ ಯೋಜನೆಯಡಿ ಮನೆ ಕಲ್ಪಿಸಿಕೊಡುವಂತೆ ಮನವಿ ಮಾಡಿದ್ದ ಮಹಿಳೆಗೆ ಗ್ರಾಮ ಪಂಚಾಯಿತಿ ಸದಸ್ಯನೊಬ್ಬ ಲೈಂಗಿಕ ಕಿರುಕುಳ ನೀಡಿರುವ ಘಟನೆ ಕಲಬುರಗಿ ಜಿಲ್ಲೆಯ ಕಮಲಾಪುರದಲ್ಲಿ ನಡೆದಿದೆ.
ಮಳಸಾಪುರ ಗ್ರಾಮದ ಮಹಿಳೆ ಸರ್ಕಾರದ ಯೋಜನೆಗಳ ಅಡಿ ಸೂರು ಕಲ್ಪಿಸಿಕೊಡುವಂತೆ ಕಮಲಾಪುರದ ಮರಗುತ್ತಿ ಗ್ರಾಮ ಪಂಚಾಯಿತಿ ಸದಸ್ಯನಿಗೆ ಮನವಿ ಮಾಡಿದ್ದರು. ಗ್ರಾಮ ಪಂಚಾಯತ್ ಸದಸ್ಯ ನೀಲಕಂಠ ರಾಠೋಡ್ ಮನೆ ಬೇಕಾದರೆ ತನ್ನ ಜೊತೆ ಮಲಗಬೇಕು ಎಂದಿದ್ದಾನಂತೆ.
ನಿನಗೆ ಮನೆ ಮಂಜೂರು ಮಾಡಿಕೊಡಬೇಕೆಂದರೆ ನೀನು ನನ್ನ ಜೊತೆ ಮಲಗು. ನೀನು ಬರದಿದ್ದರೆ ನಿನ್ನ ಮಗಳನ್ನು ಕಳಿಸು ಎಂದು ನೀಲಕಂಠ ರಾಠೋಡ್ ಮಹಿಳೆಗೆ ಕಿರುಕುಳ ನೀಡುತ್ತಿದ್ದಾನಂತೆ. ನೊಂದ ಮಹಿಳೆ ಕಮಲಾಪುರ ಠಾಣೆ ಮೆಟ್ಟಿಲೇರಿದ್ದಾರೆ.
ಆರೋಪಿ ನೀಲಕಂಠ ರಾಠೋಡ್ ವಿರುದ್ಧ ದೂರು ನೀಡಿದ್ದು, ಮಹಿಳೆಯ ದೂರಿನ ಹಿನ್ನೆಲೆಯಲ್ಲಿ ನೀಲಕಂಠ ರಾಠೋಡ್ ವಿರುದ್ಧ ಬಿಎನ್ ಎಸ್ ಕಾಯ್ದೆ 75, 78, 79 ಅಡಿ ಪ್ರಕರಣ ದಾಖಲಾಗಿದೆ.