
ಕಲಬುರಗಿ: ಸ್ನೇಹಿತನನ್ನು ಗೆಳೆಯರೇ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಕಲಬುರಗಿ ಜಿಲ್ಲೆಯಲ್ಲಿ ನಡೆದಿದೆ.
ರೇವಣಸಿದ್ದಪ್ಪ (22) ಗೆಳೆಯರಿಂದಲೇ ಕೊಲೆಯಾದ ಯುವಕ. ರೇವಣಸಿದ್ದಪ್ಪನನ್ನು ಗೆಳೆಯರು ಮನೆಯಿಂದ ಹೊರಗೆ ಕರೆದಿದ್ದು, ಮಾತನಾಡಲೆಂದು ಕರೆದುಕೊಂಡು ಹೋದವರು ಸಿಗರೇಟ್ ಸೇದುವಾಗ ಗಲಾಟೆ ಮಾಡಿ ತಲೆಯ ಮೇಲೆ ಕಲ್ಲು ಎತ್ತಿಹಾಕಿ ಹತ್ಯೆ ಮಾಡಿದ್ದಾರೆ.
12 ಬಾರಿ ರೇವಣಸಿದ್ದಪ್ಪನ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿರುವ ಭಯಾನಕ ದೃಶ್ಯ ಸಿಸಿಕ್ಯಾಮರಾದಲ್ಲಿ ಸೆರೆಯಾಗಿದೆ. ಗುಲ್ಬರ್ಗಾ ವಿಶ್ವವಿದ್ಯಾಲಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.