alex Certify ಸಹಿ ಫೋರ್ಜರಿ ಮಾಡಿ 36 ಲಕ್ಷ ರೂ. ವಂಚನೆ: ಪಾಲಿಕೆ ಆಯುಕ್ತರ ಪಿಎ ಸೇರಿ ಐವರು ಅರೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಹಿ ಫೋರ್ಜರಿ ಮಾಡಿ 36 ಲಕ್ಷ ರೂ. ವಂಚನೆ: ಪಾಲಿಕೆ ಆಯುಕ್ತರ ಪಿಎ ಸೇರಿ ಐವರು ಅರೆಸ್ಟ್

ಕಲಬುರಗಿ: ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತರ ಸಹಿ ಫೋರ್ಜರಿ ಮಾಡಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಲಿಕೆಯ ಮೂವರು ಸಿಬ್ಬಂದಿ ಸೇರಿ 5 ಮಂದಿಯನ್ನು ಬಂಧಿಸಲಾಗಿದೆ.

ಮಹಾನಗರ ಪಾಲಿಕೆ ಆಯುಕ್ತರ ಆಪ್ತ ಸಹಾಯಕ ಮಹಮ್ಮದ್ ನಯಿಮುದ್ದೀನ್, ಪಾಲಿಕೆಯಲ್ಲಿ ಗುತ್ತಿಗೆ ನೌಕರರಾದ ಅಕೌಂಟೆಂಟ್ ನಾಸಿರ್ ಅಹಮದ್, ಮಹಮ್ಮದ್ ಸಲೀಂ ಅಹಮ್ಮದ್, ಸೀನಿಯರ್ ಪ್ರೋಗ್ರಾಮರ್ ಮಹಮದ್ ಅಬ್ದುಲ್ ರೆಹಮಾನ್ ರಫೀಕ್ ಉರ್ ರೆಹಮಾನ್, ವಾಜಿದ್ ಇಮ್ರಾನ್ ಎಂ.ಎ. ಜಬ್ಬಾರ್ ಮತ್ತು ಮಿರ್ಜಾ ಆರೀಫ್ ಬೇಗ್ ಬಂಧಿತರು.

ಇವರಿಂದ 30.75 ಲಕ್ಷ ರೂ. ವಶಕ್ಕೆ ಪಡೆಯಲಾಗಿದೆ. ಚೆಕ್ ಮತ್ತು ಡಿಡಿಗಳ ಮೂಲಕ ಪಾಲಿಕೆಯ ಬ್ಯಾಂಕ್ ಖಾತೆಯಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ ಪಾಲಿಕೆಯ ಪ್ರಕಾರ ಮುಖ್ಯ ಲೆಕ್ಕಾಧಿಕಾರಿ ರಾಮಪ್ಪ ಜಾಧವ್ ಅವರು ಬ್ರಹ್ಮಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಇಂಡಿಯನ್ ಬ್ಯಾಂಕ್ ಸೂಪರ್ ಮಾರುಕಟ್ಟೆಯ ಶಾಖೆಯ ಖಾತೆಯ ಹಣವನ್ನು 20 ಚೆಕ್ ಮತ್ತು ಡಿಡಿಗಳನ್ನು ಕಲಬುರಗಿ ನಗರದಲ್ಲಿ 27/7 ನೀರು ಸರಬರಾಜು ಮಾಡಿದ ವ್ಯವಹಾರಕ್ಕೆ ಸಂಬಂಧಿಸಿದಂತೆ ಬಳಸಲಾಗಿದೆ. ಆದರೆ, ಈ ಚೆಕ್ ಮತ್ತು ಡಿಡಿಗಳ ಮೇಲೆ ಆಯುಕ್ತರ ನಕಲಿ ಸಹಿ, ಪಾಲಿಕೆಯ ನಕಲಿ ಸೀಲ್ ಬಳಸಲಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದರು.

ದಕ್ಷಿಣ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಭೂತೇಗೌಡ ವಿ.ಎಸ್. ನೇತೃತ್ವದ ತಂಡ ತನಿಖೆ ನಡೆಸಿ ಜನವರಿ 13ರಂದು ಐವರು ಆರೋಪಿಗಳನ್ನು ಬಂಧಿಸಿದೆ ಎಂದು ಪೊಲೀಸ್ ಆಯುಕ್ತ ಡಾ. ಶರಣಪ್ಪ ಎಸ್.ಡಿ. ಮಾಹಿತಿ ನೀಡಿದ್ದಾರೆ.

ಕೃತ್ಯದ ರೂವಾರಿ ಪಾಲಿಕೆ ಆಯುಕ್ತರ ಪಿಎ ನಯಿಮುದ್ದೀನ್ ಸಾಲ ಮಾಡಿಕೊಂಡಿದ್ದ. ಅದರಿಂದ ಹೊರಬರಲು ಸಹಚರರ ಜೊತೆಗೂಡಿ ಕೋಟ್ಯಂತರ ರೂಪಾಯಿ ವಂಚಿಸುವ ಯೋಜನೆ ಹಾಕಿದ್ದು, 36.56 ಲಕ್ಷ ರೂ. ದೋಚುವಲ್ಲಿ ಯಶಸ್ವಿಯಾಗಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...