
ಕಲಬುರ್ಗಿ: ಕಲಬುರ್ಗಿ ಜಿಲ್ಲೆ ಚಿಂಚೋಳಿ ತಾಲೂಕಿನ ಸುಮಾರು 30 ಗ್ರಾಮಗಳಲ್ಲಿ ಭಾರಿ ಶಬ್ದದೊಂದಿಗೆ ಭೂಕಂಪದ ಅನುಭವವಾಗಿದೆ.
ಗಡಿಗೇಶ್ವರ, ಹೊಸಹಳ್ಳಿ, ಕೆರೆಹಳ್ಳಿ ಸೇರಿ ಅನೇಕ ಗ್ರಾಮಗಳಲ್ಲಿ ಭಾರಿ ಸದ್ದು ಕೇಳಿ ಬಂದಿದೆ. ಚಿಂಚೋಳಿ ತಾಲೂಕಿನ ಈ ಗ್ರಾಮಗಳಲ್ಲಿ ಸಂಜೆ 7 ಗಂಟೆ ಸುಮಾರಿಗೆ ಎರಡು ಬಾರಿ ಸದ್ದು ಕೇಳಿ ಬಂದಿದೆ. ಭಾರಿ ಸದ್ದಿನಿಂದಾಗಿ ಜನ ಮನೆಯಿಂದ ಹೊರಗೆ ಬಂದಿದ್ದಾರೆ. ಇವತ್ತು ಬೆಳಗ್ಗೆ ಕೂಡ ಗಡಿಕೇಶ್ವರದಲ್ಲಿ ಭಾರಿ ಶಬ್ದ ಕೇಳಿ ಬಂದಿತ್ತು. ಭೂಮಿಯಿಂದ ಬರುತ್ತಿರುವ ಸದ್ದಿನಿಂದ ಜನ ಕಂಗಾಲಾಗಿದ್ದಾರೆ ಎನ್ನಲಾಗಿದೆ.
ಲಘು ಭೂಕಂಪ ಸಂಭವಿಸಿದೆ ಎಂದು ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಸೇಡಂ ಮತ್ತು ಗಡಿಕೇಶ್ವರದ ಹಲವೆಡೆ ಭೂಕಂಪದ ಅನುಭವವಾಗಿದೆ. ಭೂಮಿಯಿಂದ ಶಬ್ದ ಬಂದು ಕಂಪನದ ಅನುಭವಾಗುತ್ತಿದ್ದ ಮನೆಯಿಂದ ಹೊರಗೆ ಬಂದ ಜನ ರಸ್ತೆಗಳಲ್ಲಿ ತಮಗೆ ಆದ ಅನುಭವ ಹಂಚಿಕೊಂಡಿದ್ದಾರೆನ್ನಲಾಗಿದೆ.