alex Certify ಕಲಬುರಗಿ ಡಿಸಿಗೆ ಚುನಾವಣಾ ಆಯೋಗದ ಪ್ರಶಸ್ತಿ: ಜ. 25 ರಾಷ್ಟ್ರಪತಿಗಳಿಂದ ಪ್ರದಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಲಬುರಗಿ ಡಿಸಿಗೆ ಚುನಾವಣಾ ಆಯೋಗದ ಪ್ರಶಸ್ತಿ: ಜ. 25 ರಾಷ್ಟ್ರಪತಿಗಳಿಂದ ಪ್ರದಾನ

ಕಲಬುರಗಿ: ಚುನಾವಣಾ ಆಯೋಗವು 2024- 25 ನೇ ಸಾಲಿನ ಅತ್ಯುತ್ತಮ ಚುನಾವಣೆ ಪದ್ಧತಿ ಅಳವಡಿಸಿಕೊಂಡು ಅನುಷ್ಠಾನಕ್ಕೆ ತಂದ ಅಧಿಕಾರಿಗಳು ಮತ್ತು ಸಂಸ್ಥೆಗಳಿಗೆ ಪ್ರಶಸ್ತಿ ಘೋಷಿಸಿದೆ.

ಜನರಲ್ ಕೆಟಗರಿ ವಿಭಾಗದಲ್ಲಿ ಕಲಬುರಗಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಚುನಾವಣಾ ಅಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರಿಗೆ ಪ್ರಶಸ್ತಿ ಘೋಷಿಸಲಾಗಿದೆ.

ಜನವರಿ 25ರಂದು ನವದೆಹಲಿಯ ಮಾಣಿಕ್ ಶಾ ಸೆಂಟರ್ ನಲ್ಲಿ ನಡೆಯಲಿರುವ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಜನರಲ್ ಕೆಟಗರಿಯಲ್ಲಿ 11, ಸ್ಪೆಷಲ್ ಕೆಟಗರಿಯಲ್ಲಿ 3, ಅತ್ಯುತ್ತಮ ನಿರ್ವಹಣೆಗೆ ಮೂರು ರಾಜ್ಯಗಳ ಸಿಇಒಗಳಿಗೆ ಮತ್ತು ಅತ್ಯುತ್ತಮ ಇಲಾಖೆಗಳ ವಿಭಾಗದಲ್ಲಿ ಕೇಂದ್ರದ ಎನ್ಐಸಿ, ರೈಲ್ವೆ, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯಕ್ಕೆ ಪ್ರಶಸ್ತಿ ಘೋಷಿಸಲಾಗಿದೆ. ಕಲಬುರಗಿ ಜಿಲ್ಲಾಧಿಕಾರಿ ಫಜಿಯಾ ತರನ್ನುಮ್ ಅವರು ಈ ಪ್ರಶಸ್ತಿಗೆ ಭಾಜನರಾದ ಕರ್ನಾಟಕದ ಏಕೈಕ ಅಧಿಕಾರಿಯಾಗಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...