
ಕಲಬುರಗಿ: ಚೆಕ್ ಡ್ಯಾಮ್ ನೀರಿನಲ್ಲಿ ಕ್ರಿಮಿನಾಶಕ ಔಷಧಿ ಸೇರ್ಪಡೆಯಾಗಿದ್ದು, ಲಕ್ಷಾಂತರ ಮೀನುಗಳ ಮಾರಣಹೋಮ ನಡೆದಿರುವ ಘಟನೆ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಬೋನಸ್ ಪುರ ಹಾಗೂ ಮೊಗದಂಪುರದಲ್ಲಿ ನಡೆದಿದೆ.
ಇಲ್ಲಿನ ಎರಡು ಚೆಕ್ ಡ್ಯಾಂ ನೀರಿನಲ್ಲಿ ರಾಸಾಯನಿಕ ಕ್ರಿಮಿನಾಶಕ ಮಿಶ್ರಣಗೊಂಡು ನೀರು ಸಂಪೂರ್ಣ ಕೆಂಪು ಬಣ್ಣಕ್ಕೆ ತಿರುಗಿದೆ. ಇದರಿಂದಾಗಿ ಮೀನುಗಳು ಸಾವನ್ನಪ್ಪುತ್ತಿವೆ. ಯಾರೋ ದುಷ್ಕರ್ಮಿಗಳು ಚೆಕ್ ಡ್ಯಾಂ ನೀರಿನಲ್ಲಿ ಕ್ರಿಮಿನಾಶಕ ಬೆರಸಿರುವ ಸಂಕೆ ವ್ಯಕ್ತವಾಗಿದೆ.
ನೀರಿನಲ್ಲಿ ವಿಷಕಾರಿ ಅಂಶವಿರುವುದರಿಂದ ಎರಡೂ ಗ್ರಾಮಗಳ ಜನರಲ್ಲಿಯೂ ಆತಂಕ ಶುರುವಾಗಿದೆ. ಜನರು ಹಾಗೂ ಜಾನುವಾರುಗಳ ಕುಡಿಯುವ ನೀರಿಗೂ ಸಂಕಷ್ಟ ಎದುರಾಗಿದೆ. ಘಟನಾ ಸ್ಥಳಕ್ಕೆ ಚಿಂಚೋಳಿ ಆರೋಗ್ಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕುಂಚಾವರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.